ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಮಲೈ ಭೀಷ್ಮ ಶಪತ ಕೈಗೊಂಡಿದ್ದು. ಅಣ್ಣಾಮಲೈ ಚಾಟಿಯಿಂದ ತಮಗೆ ಹೊಡೆದುಕೊಳ್ಳುವ ಮೂಲಕ ಹೆಣ್ಣುಮಕ್ಕಳ ಲೈಂಗಿಕ ದೌರ್ಜನ್ಯ ವಿರುದ್ಧ ಪ್ರತಿಭಟಿಸಿದ್ದಾರೆ. ಇಂದು ಬೆಳಗ್ಗೆ ಅವರ ನಿವಾಸದ ಮುಂದೆ ಚಾಟಿಯಿಂದ ಹೊಡೆದುಕೊಂಡು ತಮಗೆ ತಾವೇ ನೋವು ಮಾಡಿಕೊಂಡಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ, ಅಣ್ಣಾಮಲೈ ಅವರು ತಮ್ಮ ಶೂಗಳನ್ನು ತೆಗೆದು ಆರು ಬಾರಿ ಚಾಟಿ ಬೀಸುವುದಾಗಿ ಘೋಷಿಸಿದರು, 48 ದಿನಗಳ ಕಾಲ ಉಪವಾಸ ಮಾಡುವುದಾಗಿ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರವನ್ನು ಅಧಿಕಾರದಿಂದ ತೆಗೆದುಹಾಕುವವರೆಗೆ ಪಾದರಕ್ಷೆಗಳನ್ನು ಧರಿಸುವುದಿಲ್ಲ ಎಂದು ಘೋಷಿಸಿದ್ದರು.
ಇತ್ತೀಚಿನ ಅಣ್ಣಾ ವಿಶ್ವವಿದ್ಯಾನಿಲಯದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪ್ರತಿಕ್ರಿಯೆಯ ಬಗ್ಗೆ ಸಾರ್ವಜನಿಕ ಆಕ್ರೋಶ ಹೆಚ್ಚುತ್ತಿರುವ ನಡುವೆ ಅಣ್ಣಾಮಲೈ ಪ್ರತಿಭಟನೆಗೆ ಮುಂದಾಗಿದ್ದಾರೆ. ಅವರ ಈ ನಡೆ ರಾಜಕೀಯ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಬೆಂಬಲ ಮತ್ತು ಚರ್ಚೆ ಎರಡನ್ನೂ ಹುಟ್ಟುಹಾಕಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ