ಉಡುಪಿ: ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಕೂಲಿ ಕಾರ್ಮಿಕನ ಹತ್ಯೆಗೆ ಯತ್ನಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ರವಿ(30) ಹಲ್ಲೆಗೊಳಗಾದವರು, ವಾರದ ಹಿಂದೆ ಕೂಲಿ ಕೆಲಸಕ್ಕಾಗಿ ಉಡುಪಿಗೆ ಬಂದಿದ್ದು, ಉಡುಪಿ ತಾಲ್ಲೂಕು ಮೂಡನಿಡಂಬೂರು ಗ್ರಾಮದ ಸಿಟಿ ಬಸ್ ನಿಲ್ದಾಣದ ಹತ್ತಿರದ ನಯನಾ ಫ್ಯಾನ್ಸಿ ಸ್ಟೋರ್ ಬಳಿ ಇರುವ ತಿರುಮಲ ಜ್ಯೂವಲೆರ್ಸ್ ಎದುರು ಫಿರ್ಯಾದುದಾರರಿಗೆ ಪರಿಚಯವಿದ್ದ ಹನುಮಂತ ನೊಂದಿಗೆ ಮೊಬೈಲ್ ವಿಚಾರವಾಗಿ ಮಾತಿಗೆ ಮಾತು ಬೆಳೆದಿದ್ದು, ಅದೇ ಸಮಯದಲ್ಲಿ ಹನುಮಂತನು ಫಿರ್ಯಾದುದಾರರ ತುಟಿ ಮತ್ತು ಕೆನ್ನೆಯ ಭಾಗಕ್ಕೆ ಕೈಯಿಂದ ಹೊಡೆದಿದ್ದು ಮುಖವು ರಕ್ತಗಾಯವಾಗಿರುತ್ತದೆ ನಂತರ ಕಾಲಿನಿಂದ ತುಳಿದು ಕಲ್ಲಿನಿಂದ ತಲೆಗೆ ಹೊಡೆದು ಗಾಯಮಾಡಿರುತ್ತಾನೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 224/2024 ಕಲಂ: 115, 118(1) BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ