Slider


ಉಡುಪಿ: ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ..!

 


ಉಡುಪಿಯಲ್ಲಿ ಚಿರತೆ ಕಾಟಕ್ಕೆ ಮನೆಯಲ್ಲಿರುವ ನಾಯಿಗಳಲ್ಲೇ ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗುತ್ತಿವೆ. ಅದೇ ರೀತಿ ಮನೆ ಅಂಗಳದಲ್ಲಿ ಆಟ ಆಡುತ್ತಿದ್ದ ನಾಯಿಯನ್ನು ಚಿರತೆ ಸಲೀಸಲಾಗಿ ಎತ್ತಿಕೊಂಡು ಹೋದ ಘಟನೆ ಎಲ್ಲೂರು ಮಾಣಿಯೂರಿನಲ್ಲಿರುವ ಮುರಲಿ ಶೆಟ್ಟಿಯವರ ಮನೆಯ ಆವರಣದಲ್ಲಿ ನಡೆದಿದೆ.

ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮನೆ ಮಂದಿ ಬಾಗಿಲು ಹಾಕಿ ಮನೆಯೊಳಗೆ ಭಜನೆಯಲ್ಲಿ ನಿರತರಾಗಿದ್ದರು. ಈ ವೇಳೆ ಬೊಗಳುತ್ತಿದ್ದ ನಾಯಿ ನಾಪತ್ತೆಯಾಗಿದ್ದನ್ನು ಗಮನಿಸಿ ಸಿಸಿ ಟಿವಿ ಪರಿಶೀಲಿಸಿದಾಗ ಕೃತ್ಯ ಗಮನಕ್ಕೆ ಬಂದಿದೆ. ಪದೇ ಪದೇ ಈ ಭಾಗದಲ್ಲಿ ಚಿರತೆ ಕಾಟ ತೋರುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo