ಉಡುಪಿ : ಕಲ್ಮಾಡಿ ಚರ್ಚ್‌ನ ಬಳಿ ಇರುವ ಹೊಸ ಕಟ್ಟಡದಲ್ಲಿ ಅಲ್ಯೂಮಿನಿಯಂನ ಕೆಲಸ ಮಾಡುವ ವೇಳೆ ಕಾರ್ಮಿಕನೊಬ್ಬ 2ನೇ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರಪ್ರದೇಶದ ಮೋಹನ್ ರಾಮ್ (29) ಸಾವನ್ನಪ್ಪಿದ್ದು, ಅವರು ಕಳೆದ 20 ದಿನಗಳಿಂದ ಕಲ್ಮಾಡಿ ಬಳಿ ಇರುವ ಹೊಸ ಕಟ್ಟಡದಲ್ಲಿ ಅಲ್ಯುಮಿನಿಯಂನ ಬೀಡಿಂಗ್ ಗ್ಲಾಸ್‌ನ ಕೆಲಸ ಮಾಡುತ್ತಿದ್ದರು.
ಡಿ. 17ರಂದು 2ನೇ ಮಹಡಿಯಿಂದ ಕೆಳಗೆ ಬಿದ್ದಿದ್ದ ಅವರಿಗೆ ತಲೆ, ಎದೆಯ ಭಾಗ, ಮತ್ತು ಬೆನ್ನಿಗೆ ತೀವ್ರ ಸ್ವರೂಪದ ಗಾಯವಾಗಿತ್ತು.
ತತ್‌ಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಡಿ. 21ರಂದು ಮೃತಪಟ್ಟಿದ್ದಾರೆ. ಕಟ್ಟಡದ ಮಾಲಕರು ಮತ್ತು ಗುತ್ತಿಗೆದಾರರ ಕೆಲಸದ ಸಮಯದಲ್ಲಿ ಮುಂಜಾಗ್ರತೆ ವಹಿಸಿದೇ ನಿರ್ಲಕ್ಷ್ಯತನ ತೋರಿದ್ದಾರೆ ಎಂದು ದೂರಲಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ