ಉಡುಪಿ: ಕಾಂಗ್ರೆಸ್ ಸರ್ಕಾರದಿಂದ ಕಾರ್ಕಳ ಪ್ರವಾಸೋದ್ಯಮದ ಕಗ್ಗೊಲೆ : ಮಾಜಿ ಸಚಿವ ಸುನಿಲ್ ಕುಮಾರ್
ಉಡುಪಿ: ಕಾಂಗ್ರೆಸ್ ಸರ್ಕಾರ ಕಾರ್ಕಳದ ಪ್ರವಾಸೋದ್ಯಮದ ಕಗ್ಗೊಲೆ ಮಾಡಿದೆ, ಅಲ್ಲದೇ ಪರಶುರಾಮ ಥೀಮ್ ಪಾರ್ಕ್ ಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಸುನೀಲ್ ಕುಮಾರ್ ಹೇಳಿದರು.
ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಥೀಮ್ ಪಾರ್ಕ್ ವಿವಾದದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಸೋಲಿನ ಹತಾಶೆಯಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಶೀಘ್ರದಲ್ಲೇ ಪ್ರವಾಸಿ ತಾಣವನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿ ಸುಳ್ಳು ಆರೋಪ ಹಾಗೂ ಫೈಬರ್ ಮೂರ್ತಿ ಎಂದು ದೂರಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪರಶುರಾಮ ಮೂರ್ತಿ ತಯಾರಿಸಿದ ಶಿಲ್ಪಿ ವಿನ್ಯಾಸ ಬದಲಾಯಿಸಲು ಅನುಮತಿ ಪಡೆದು ಮೂರ್ತಿ ತೆರವು ಕಾರ್ಯ ಮಾಡಿದ್ದಾರೆ. ಸರ್ಕಾರದ ಯೋಜನೆ ಕೈಸೇರುವ ಮೊದಲೇ ತನಿಖೆ ಮಾಡುವ ಪರಂಪರೆ ಉಡುಪಿಯಲ್ಲಿ ಆರಂಭವಾಗಿದೆ ಎಂದು ಸುನೀಲ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ..
ಈ ಹಿಂದೆ ಶಿಲ್ಪಿ ಮೂರ್ತಿಯ ಮರು ವಿನ್ಯಾಸದ ಬಗ್ಗೆ ಕೋರಿದ್ದರು, ಅದಕ್ಕೆ ಸ್ವತಃ ಜಿಲ್ಲಾಧಿಕಾರಿಗಳೇ ಅನುಮತಿ ಕೊಟ್ಟಿದ್ದಾರೆ. ಹೀಗಿರುವಾಗ ಮೂರ್ತಿ ತೆರವು ಮಾಡಿದರೆ ಅದು ಕಳ್ಳತನ ಹೇಗೆ ಆಗುತ್ತದೆ ಎಂದು ಸುನೀಲ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.
ಮೂರ್ತಿಯ ಮರು ವಿನ್ಯಾಸ ಕಾರ್ಯ ಕಾಮಗಾರಿ ನಿಂತು ಒಂದು ವರ್ಷವಾಗಿದೆ. ಇದರಿಂದ ಪ್ರವಾಸೋದ್ಯಮಕ್ಕೆ, ಸರ್ಕಾರಕ್ಕೆ ಬಹಳ ನಷ್ಟವಾಗಿದೆ. ಸರ್ಕಾರ ಈ ಕೂಡಲೇ ಬಾಕಿ ಇರುವ ಹಣವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Ayyo shivane .. Inna meese mannu aagilla🤣🤣🤣
ಪ್ರತ್ಯುತ್ತರಅಳಿಸಿ