ಉಡುಪಿ : ನಗರದ ಮನೆಯೊಂದರಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ವಜ್ರಾಭರಣ ಕಳ್ಳತನಗೈದು ಪರಾರಿಯಾಗಿದ್ದ ಆರೋಪಿಯನ್ನು ಬಂದಿಸುವಲ್ಲಿ ಉಡುಪಿ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂದಿತ ಆರೋಪಿಯನ್ನು ಕೊಪ್ಪಳದ, ಕುಷ್ಟಗಿ ತಾಲೂಕಿನ ಸಿದ್ದಪ್ಪ ಕೆ. ಕೊಡ್ಲಿ(23) ಎಂದು ಗುರುತಿಸಲಾಗಿದೆ.
ಪ್ರಸಾದ್ ಎಂಬವರ ಮನೆಯಲ್ಲಿ ಆರೋಪಿ ಸಿದ್ದಪ್ಪ ಕೆ. ಕೊಡ್ಲಿ ಹೋಂ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದನು. ಮನೆಯಿಂದಲೇ ಲಕ್ಷಾಂತರ ರೂ. ಮೌಲ್ಯದ ಚಿನ್ನ ಹಾಗೂ ವಜ್ರಭರಣ ಕಳ್ಳತನಗೈದು ಪರಾರಿಯಾಗಿದ್ದನು. ಬಂಧಿತ ಆರೋಪಿಯಿಂದ 30,00,000/- ಮೌಲ್ಯದ 374.45 ಗ್ರಾಮ್ಸ್ ತೂಕದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳನ್ನು ಸ್ವಾಧೀನಪಡಿಸಲಾಗಿದೆ.
ಸದ್ರಿ ಪ್ರಕರಣದ ತನಿಖೆಯನ್ನು ಪಿ.ಐ, ರಾಮಚಂದ್ರ ನಾಯಕ್ , ಉಡುಪಿ ನಗರ ಠಾಣೆರವರು ಕೈಗೊಂಡು ಆರೋಪಿ ಮತ್ತು ಸ್ವತ್ತು ತನಿಖೆಯನ್ನು ಪತ್ತೆಯ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಪಿಎಸ್‌ಐ ಈರಣ್ಣ ಶಿರಗುಂಪಿ, ಪುನೀತ್, ಉಡುಪಿ ಸೆನ್ ಪೊಲೀಸ್ ಠಾಣೆ ಪಿ. ಎಸ್. ಐ ಪವನ್ ಕುಮಾರ್, ಉಡುಪಿ ನಗರ ಠಾಣೆಯ ಅಬ್ದುಲ್ ಬಶೀರ್, ಸಂತೋಷ, ಚೇತನ್ ಮತ್ತು ಸೆನ್ ಠಾಣೆಯ ಪ್ರವೀಣ ಕುಮಾರ್, ಪ್ರವೀಣ ರವರ ತಂಡ ನಡೆಸಿತ್ತು. ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ