ಕಾರ್ಕಳ: ಕಾರುಗಳ ನಡುವೆ ಭೀಕರ ಅಪಘಾತ: ಚಾಲಕ ಗಂಭೀರ
ಕಾರ್ಕಳ: ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕನೋರ್ವ ಗಂಭೀರ ಗಾಯಗೊಂಡು ಕಾರಿನೊಳಗೆ ಸಿಲುಕಿದ ಘಟನೆ ಗೋಮ್ಮಟೇಶ್ವರ ಬೆಟ್ಟದ ಸಮೀಪ ಶನಿವಾರ(ನ.9) ಮಧ್ಯಾಹ್ನ ನಡೆದಿದೆ.
ಗಾಯಗೊಂಡ ಚಾಲಕನನ್ನು ಮೂಡುಬಿದಿರೆ ನಿವಾಸಿ ಸಂದೇಶ ಎನ್ನಲಾಗಿದೆ.
ಅಪಘಾತದಲ್ಲಿ ಓಮ್ನಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಚಾಲಕ ಸಂದೇಶ್ ಅವರು ಗಂಭೀರ ಗಾಯಗೊಂಡು ಕಾರಿನೊಳಗೆ ಸಿಲುಕಿದ್ದರು ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಎಷ್ಟೇ ಪ್ರಯತ್ನಿಸಿದರೂ ಗಾಯಾಳುವನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ, ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಅವರನ್ನು ಕರೆಯಲಾಯಿತು ಬಳಿಕ ಬಂದ ಅಗ್ನಿಶಾಮಕ ದಳ ಕಾರಿನ ಬಾಗಿಲನ್ನು ಕಟ್ಟರ್ ಯಂತ್ರದ ಮೂಲಕ ತೆರವುಗೊಳಿಸಿ ಗಾಯಾಳುವನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ಠಾಣಾಧಿಕಾರಿ ಅಲ್ಟರ್ಟ್ ಮೋನಿಸ್, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಶೇಖರ್, ಸಿಬಂದಿ ಜಯ ಮೂಲ್ಯ, ಸುರೇಶ್, ನಿತ್ಯಾಾನಂದ, ಉಮೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ