Slider

ಉಡುಪಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

Udupi

 


ಉಡುಪಿ: ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನಗೆಳ ಉಡುಪಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆಯಾಗಿದ್ದಾರೆ.

ಸಮಿತಿಯ ಸದಸ್ಯರಾಗಿ ಶಬರೀಶ್‌ ಸುವರ್ಣ, ಉಸ್ತಾದ್‌ ಸಾದಿಕ್‌, ಡಾ| ಸಂತೋಷ್‌ ಕುಮಾರ್‌, ದಿನೇಶ್‌ ಜತ್ತನ್ನ, ಪ್ರವೀಣ್‌ ಕುಮಾರ್‌ ಹೆಗ್ಡೆ, ಸಂತೋಷ್‌ ಶೆಟ್ಟಿ, ಮಾಲತಿ ಆಚಾರ್ಯ, ಸುಧಾಕರ್‌ ಪೂಜಾರಿ, ದಿನೇಶ್‌ ಪೂಜಾರಿ, ಪ್ರೇಮಲತಾ ಸೋನ್ಸ್‌, ಗಣೇಶ್‌ ಶೆಟ್ಟಿಬೆಟ್ಟು, ವಿಜಯ್‌ ನಾಯ್ಕ್ ಹಾಗೂ ಅರ್ಚನಾ ದೇವಾಡಿಗ ಆಯ್ಕೆಯಾಗಿದ್ದಾರೆ.

CLICK HERE SHOP NOW

ಸಮಿತಿ ಕಚೇರಿಯ ಉದ್ಘಾಟನೆ ನ.30ರಂದು ಸಂಜೆ 3ಕ್ಕೆ ತಾ.ಪಂ.ಕಟ್ಟಡದ ಮೊದಲನೇ ಮಹಡಿಯಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಉದ್ಘಾಟಿಸಲಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ವಿಧಾನಪರಿಷತ್‌ ಸದಸ್ಯರಾದ ಮಂಜುನಾಥ್‌ ಭಂಡಾರಿ, ಐವನ್‌ ಡಿ’ಸೋಜಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್‌ ಹೇರೂರು, ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ, ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ, ಮಾಜಿ ಶಾಸಕ ಗೋಪಾಲ್‌ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್‌ ರೈ, ಲಾವಣ್ಯಾ ಬಲ್ಲಾಳ್‌, ಕಾಂಗ್ರೆಸ್‌ ನಾಯಕರಾದ ಎಂ.ಎ.ಗಫೂರ್‌, ಪ್ರಸಾದ್‌ರಾಜ್‌ ಕಾಂಚನ್‌,ಮುನಿಯಾಲು ಉದಯ್‌ ಶೆಟ್ಟಿ, ದಿನೇಶ್‌ ಹೆಗ್ಡೆ ಮೊಳಹಳ್ಳಿ, ಸಂತೋಷ್‌ ಕುಲಾಲ್‌, ಗೀತಾ ವಾಗ್ಲೆ, ಮಮತಾ ಶೆಟ್ಟಿ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo