ಉಡುಪಿ: ಪಡುಬಿದ್ರಿ ಸಮೀಪ ಪೂನಾ ಮೂಲದವರಾಗಿದ್ದು, ಉಚ್ಚಿಲ ಬಡಾ ಗ್ರಾಮದ ಅಬ್ದುಲ್ ಅಜೀಜ್ ಅವರನ್ನು ವಿವಾಹವಾಗಿದ್ದ ಅಯಿಷಾ(33) ಅವರು ನವೆಂಬರ್ 26ರಂದು ಮನೆಬಿಟ್ಟು ಹೋದವರು ಮರಳಿ ಮನಗೆ ಬಾರದೆ ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಯಿಷಾ ಅವರು ತನ್ನ ಮಗ ಹಾಗೂ ಗಂಡನೊಂದಿಗೆ ಗಲ್ಫ್ ರಾಷ್ಟ್ರದಲ್ಲಿದ್ದು, ಕಳೆದ 6 ತಿಂಗಳಿನಿಂದ ಅವರು ಬಡಾ ಗ್ರಾಮದಲ್ಲಿ ವಾಸವಗಿದ್ದರು.
ಅಬ್ದುಲ್ ಅಜೀಜ್ ಅವರು ತಾಯಿಯನ್ನು ಕರೆದುಕೊಂಡು ನವೆಂಬರ್ 26ರಂದು ಮಣಿಪಾಲದ ಆಸ್ಪತ್ರೆಗೆ ಹೋಗಿ ಮರಳಿ ಬರುವ ವೇಳೆ ಅಯಿಷಾ ಮನೆಯಲ್ಲಿ ಇರಲಿಲ್ಲ.
ಕಾಣೆಯಾದ ಅಯಿಷಾ ಅವರ ಚಹರೆ : ಬಿಳಿ ಮೈಬಣ್ಣ ಹೊಂದಿದ್ದು, ಮುಖದಲ್ಲೊಂದು ಮಚ್ಚೆಯಿದೆ. ಕನ್ನಡಕವನ್ನು ಧರಿಸುತ್ತಾರೆ. 5.2 ಅಡಿ ಎತ್ತರವಿದ್ದು, ಬುರ್ಖಾ ಧರಿಸಿದ್ದ ಅವರು ಮರಾಠಿ, ಹಿಂದಿ, ಇಂಗ್ಲಿಷ್ ಹಾಗೂ ಬ್ಯಾರಿ ಭಾಷೆಯನ್ನು ಮಾತಾಡುತ್ತಾರೆ. ಅವರ ಬಗ್ಗೆ ಯಾರಿಗಾದರೂ ಸುಳಿವು ಲಭ್ಯವಾದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ(0820 2555452)ಯನ್ನು ಸಂಪರ್ಕಿಸಲು ಪೊಲೀಸರು ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ