Slider

ಉಡುಪಿ: ಪೊಲೀಸ್‌ ತನಿಖಾಧಿಕಾರಿಯೆಂದು ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ....!!

Udupi

 


ಉಡುಪಿ: ನಗರದಲ್ಲಿ ಪೊಲೀಸ್‌ ತನಿಖಾಧಿಕಾರಿಯೆಂದು ನಂಬಿಸಿ ಮಹಿಳೆಯೊಬ್ಬರ ಬ್ಯಾಂಕ್‌ ಖಾತೆಯಿಂದ ಲಕ್ಷಾಂತರ ರೂ.ಗಳನ್ನು ಲಪಟಾಯಿಸಿದ ಘಟನೆ ಸಂಭವಿಸಿದೆ.

ವಿದ್ಯಾ ಎಂಬವರಿಗೆ ಅಪರಿಚಿತ ವ್ಯಕಿಯೋರ್ವ ಕರೆ ಮಾಡಿ ಏರ್‌ಟೆಲ್‌ ಕಂಪೆನಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದ. ನಿಮ್ಮ ಆಧಾರ್‌ ನಂಬರು ಬಳಸಿ ಮುಂಬಯಿಯಲ್ಲಿ ಯಾರೋ ಸಿಮ್‌ ಖರೀದಿ ಮಾಡಿ ಅದರಲ್ಲಿ ಸ್ಕ್ಯಾಮ್‌ ಮೆಸೇಜ್‌ ಮತ್ತು ಟ್ರೇಡಿಂಗ್‌ ಮೆಸೇಜ್‌ ಕಳುಹಿಸುತ್ತಿದ್ದು ನಿಮ್ಮ ಎಲ್ಲ ಮೊಬೈಲ್‌ ನಂಬರ್‌ ಬ್ಲಾಕ್‌ ಮಾಡಲಾಗುವುದು ಎಂದು ಹೇಳಿದ. ಬಳಿಕ ಕರೆಯನ್ನು ಸಹರಾ ಪೊಲೀಸ್‌ ಠಾಣೆಗೆ ವರ್ಗಾಯಿಸುವುದಾಗಿ ತಿಳಿಸಿದ.

ನಂತರ ಅತ್ತ ಕಡೆಯಿಂದ ಮೋಹನ್‌ ಕುಮಾರ್‌ ಎಂಬಾತ ಮಾತನಾಡಿ, ತಾನು ಸಹರಾ ಪೊಲೀಸ್‌ ಠಾಣೆಯ ತನಿಖಾಧಿಕಾರಿ ಎಂದು ತಿಳಿಸಿ ನಿಮ್ಮ ಆಧಾರ್‌ ಕಾರ್ಡ್‌ನ ಮುಖಾಂತರ ಮುಂಬಯಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದು ಈ ಖಾತೆಯನ್ನು ವಿವೇಕ್‌ದಾಸ್‌ ಎಂಬವರು ಆಪರೇಟ್‌ ಮಾಡಿ ಸದರಿ ಖಾತೆಗೆ ಹ್ಯುಮೆನ್‌ ಟ್ರಾಫಿಕಿಂಗ್‌ ಮತ್ತು ಮನಿ ಲ್ಯಾಡ್ರಿಂಗ್‌ ಮುಖಾಂತರ ಹಣ ವರ್ಗಾವಣೆ ಮಾಡಿರುತ್ತಾರೆ. ಖಾತೆ ನಿಮ್ಮ ಹೆಸರಿನಲ್ಲಿ ಇರುವುದರಿಂದ ನಿಮ್ಮ ಎಲ್ಲ ಅಕೌಂಟ್‌ ಪರಿಶೀಲನೆ ಮಾಡಬೇಕಾಗಿದೆ ಎಂದು ನಂಬಿಸಿದ್ದಾನೆ ಎನ್ನಲಾಗಿದೆ.

ತದನಂತರ ಮೋಹನ್‌ ಕುಮಾರ್‌ ಪೊಲೀಸ್‌ ಅಧಿಕಾರಿ ಎಂಬುದಾಗಿ ಹೇಳಿಕೊಂಡು ವಿದ್ಯಾ ಅವರಿಗೆ ಕರೆ ಮಾಡಿ ನೀವು ಕೂಡ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುವಿರಿ, ಎಲ್ಲಿಗೂ ಹೋಗುವಂತಿಲ್ಲ, ಎಲ್ಲಿಗೆ ಹೋಗುವುದಿದ್ದರೂ ನಮಗೆ ತಿಳಿಸಬೇಕು ಎಂದು ಬೆದರಿಸಿ ನಿಮ್ಮ ಎಲ್ಲ ಅಕೌಂಟ್‌ ಸೀಜ್‌ ಆಗುತ್ತದೆ. ಆದ್ದರಿಂದ ನಿಮ್ಮ ಅಕೌಂಟ್‌ನಲ್ಲಿರುವ ಎಲ್ಲ ಹಣವನ್ನು ನಾನು ಹೇಳಿದ ಯುಪಿಐ ನಂಬರಿಗೆ ಹಾಗೂ ಬ್ಯಾಂಕ್‌ ಖಾತೆಗೆ ಕಳುಹಿಸಿ ಎಂದು ತಿಳಿಸಿದ್ದಾನೆ. ಇದನ್ನು ನಂಬಿದ ವಿದ್ಯಾ ಅ. 16ರಿಂದ ನ. 7ರ ವರೆಗೆ ಹಂತ ಹಂತವಾಗಿ 19,71,679 ರೂ.ಗಳನ್ನು ವರ್ಗಾಯಿಸಿ, ಹಣ ಕಳೆದುಕೊಂಡು ಮೋಸ ಹೋಗಿದ್ದಾರೆ. 

ಈ ಘಟನೆ ಸಂಬಂಧ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo