Slider

ಉಡುಪಿ: ಸಿಟಿಬಸ್ ಚಾಲಕನ ಸಂಶಯಾಸ್ಪದ ಸಾವು: ತನಿಖೆಗೆ ದಸಂಸ ಆಗ್ರಹ

Udupinews

 







ಉಡುಪಿ: ಸಿಟಿಬಸ್ ಚಾಲಕನ ಸಂಶಯಾಸ್ಪದ ಸಾವು: ತನಿಖೆಗೆ ದಸಂಸ ಆಗ್ರಹ 


ಉಡುಪಿ: ಇಲ್ಲಿನ ಮಲ್ಪೆ ಪೋಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ನೀನಗರದ ಪಾಳೆಕಟ್ಟೆ ನಿವಾಸಿ ಪ್ರಸಾದ್ (40)ರವರ ಸಾವು ಹಲವು ಸಂಶಯಕ್ಕೆ ಎಡೆಮಾಡಿದ್ದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ತಕ್ಷಣ ಉನ್ನತ ಮಟ್ಟದ ತನಿಖೆನಡೆಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.

ಶುಕ್ರವಾರ ರಾತ್ರಿ ಮನೆ ಸಮೀಪವೇ ನಡೆದ ಘಟನೆಯನ್ನು ಮರುದಿನ ಮದ್ಯಹ್ನದ ಹೋತ್ತಿಗೆ ಮೃತದೇಹ ನೀರಿನ ಟ್ರಮ್ನ ಒಳಗಿನಿಂದ ದೇಹದ ಕಾಲು ಇದ್ದು,ಮೇಲ್ಬಾಗದಲ್ಲಿ ಅರ್ಧ ತಲೆಕೆಳಗೆ ಹಾಕಿದ ರೀತಿಯಲ್ಲಿ ಪತ್ತೆಯಾಗಿದ್ದು,ಮೃತದೇಹದ ಹಲವು ಭಾಗಗಳಲ್ಲಿ ಗಾಯಗಳಿದ್ದು ಸಂಶಯಕ್ಕೆ ಎಡೆಮಾಡಿದೆ.

ಆತ್ಮಹತ್ಯೆ ಎಂದು ಬಿಂಬಿಸಿರುವ ಈ ಘಟನೆ ಹಲವು ಸಂಶಯಾಸ್ಪದ ರೀತಿಯಲ್ಲಿ ಮೃತದೇಹ ಪತ್ತೆಯಾಗಿರುವುದರಿಂದ ಊರಿನ ಸುತ್ತುಮುತ್ತ ಭಯದ ವಾತಾವರಣ ನಿರ್ಮಾನವಾಗಿದ್ದು ಮೃತನ ಮನೆಯವರನ್ನು ಸೂಕ್ತ ತನಿಖೆ ನಡೆಸಿ ನ್ಯಾಯ ನೀಡುವಂತೆ ಜಿಲ್ಲಾ ಪೋಲೀಸ್ ಆಧೀಕ್ಷಕರಿಗೆ ದಲಿತ ಮುಖಂಡರಾದ ವಾಸುದೇವ ಮುದ್ದೂರು,ಗಣೇಶ್ ನೆರ್ಗಿ,ಹರೀಶ್ ಸಲ್ಯಾನ್,ರವಿ ಲಕ್ಷ್ಮೀನಗರ,ಮುಂತಾದವರು ಆಗ್ರಹಿಸಿದ್ದಾರೆ.










0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo