ಕಿನ್ನಿಗೋಳಿ: ಪತ್ನಿ - ಮಗುವನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪತಿ
ಕಿನ್ನಿಗೋಳಿ: ಪತ್ನಿ ಮಗುವನ್ನು ಹತ್ಯೆಗೈದು ತಾನೂ ಅತ್ಮಹತ್ಯೆ ಮಾಡಿದ ಘಟನೆ ಮೂಲ್ಕಿ ಸಮೀಪದ ಪಕ್ಷಿಕೆರೆಯಲ್ಲಿ ಶನಿವಾರ(ನ.9) ಬೆಳಕಿಗೆ ಬಂದಿದೆ.
ಮೃತರನ್ನು ಪ್ರಿಯಾಂಕ ((28) ಹೃದಯ್ (4) ಎಂದು ಗುರುತಿಸಲಾಗಿದೆ. ಹತ್ಯೆಗೈದಾತನನ್ನು ಕಾರ್ತಿಕ್ ಭಟ್ (32)ಎಂದು ಗುರುತಿಸಲಾಗಿದೆ.
ಆರೋಪಿ ಕಾರ್ತಿಕ್ ಪಕ್ಷಿಕೆರೆಯಲ್ಲಿರುವ ತನ್ನ ಮನೆಯಲ್ಲಿ ಪತ್ನಿ ಮತ್ತು ಮಗುವನ್ನು ಹತ್ಯೆಗೈದು ಬಳಿಕ ಮೂಲ್ಕಿಯ ಬೆಳಾಯರು ನಲ್ಲಿ ರೈಲಿಗೆ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶುಕ್ರವಾರ ಮಧ್ಯಾಹ್ನ ಯುವಕ ರೈಲಿಗೆ ತಲೆಕೊಟ್ಟು ಅತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತನಿಖೆ ನಡೆಸುವಾಗ ಅತ್ಮಹತ್ಯೆ ಮಾಡಿಕೊಂಡವನು ಪಕ್ಷಿಕೆರೆಯ ಕಾರ್ತಿಕ್ ಭಟ್ ಎಂದು ತಿಳಿದಿದ್ದು ಮನೆಗೆ ಬಂದಾಗ ಪತ್ನಿ ಮಗು ಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ