ಕೋಟ: ಆಕಸ್ಮಿಕವಾಗಿ ಕೆರೆಗೆ ಬಿದ್ದು ವಿದ್ಯಾರ್ಥಿನಿ ಮೃತ್ಯು
ಕೋಟ: ಆಕಸ್ಮಿಕವಾಗಿ ಕೆರೆಗೆ ಬಿದ್ದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಕೋಟದದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಶೃತಿ (16) ಎಂದು ಗುರುತಿಸಲಾಗಿದೆ.
ಶೃತಿ (16) ಮಂದಾರ್ತಿಯಲ್ಲಿ ಮೊದಲನೇ ವರ್ಷದ ಪಿಯುಸಿ ಒದುತ್ತಿದ್ದು ನ.17 ರಂದು ಆದಿತ್ಯವಾರವಾಗಿದ್ದರಿಂದ ಮನೆಯಲ್ಲೆ ಇದ್ದು ಮದ್ಯಾಹ್ನ02:00 ಗಂಟೆಗೆ ತೆಂಗಿನ ತೋಟದಲ್ಲಿರುವ ತೆಂಗಿನಕಾಯಿ ಹೆಕ್ಕಿ ತರುವುದಾಗಿ ತೋಟಕ್ಕೆ ಹೋಗಿದ್ದು ಸಂಜೆ ಆದರೂ ಮನೆಗೆ ಬಾರದ ಕಾರಣ ಎಲ್ಲಾ ಕಡೆ ಹುಡುಕಾಡಿರುತ್ತಾರೆ.
ನಂತರ ದಿನಾಂಕ 18/11/2024 ರಂದು ಬೆಳಿಗ್ಗೆ ತೋಟದಲ್ಲಿರುವ ಆವರಣ ಇಲ್ಲದಿರುವ ಕೆರೆಯಲ್ಲಿ ಶೃತಿಯ ಮೃತ ದೇಹ ಕೆರೆಯ ತಳಬಾಗದಲ್ಲಿ ಕಂಡುಬಂದಿರುತ್ತದೆ. ಶೃತಿ ದಿನಾಂಕ 17/11/2024 ರಂದು ಮದ್ಯಾಹ್ನ ತೆಂಗಿನ ಕಾಯಿ ಹೆಕ್ಕಲು ತೋಟಕ್ಕೆ ಹೋಗಿದ್ದು ಆ ಸಮಯ ತೋಟದ ಮದ್ಯದಲ್ಲಿರುವ ಆವರಣವಿಲ್ಲದ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 46/2024 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ