ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದ್ದು, ಬುಧವಾರ ವಿವಿಧ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ.
ಮಹಾರಾಷ್ಟ್ರ ಮತ್ತು ಜಾರ್ಖಂಡ್ ಎರಡೂ ರಾಜ್ಯಗಳಲ್ಲೂ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಜಯಭೇರಿ ಬಾರಿಸಲಿದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಮೂಲಕ 2-0 ಅಂತರ ಗೆಲುವು ಸಾಧಿಸಲಿದ್ದು, ತೀವ್ರ ಪೈಪೋಟಿ ಒಡ್ಡಿದ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಗೆಲುವಿನ ಹೊಸ್ತಿಲಲ್ಲಿ ಎಡವಲಿದೆ.
ಬಿಜೆಪಿ, ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ಹಾಗೂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಕೂಟವಾದ ಮಹಾಯುತಿಗೆ ಸ್ಪಷ್ಟ ಬಹುಮತ ಲಭಿಸಲಿದೆ ಎಂದು ಸಮೀಕ್ಷೆಗಳು ಹೇಳಿದೆ.
ಮಹಾರಾಷ್ಟ್ರದ ೨೮೮ ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಬಹುಮತ ಪಡೆಯಲು ೧೪೫ ಸ್ಥಾನಗಳ ಅಗತ್ಯವಿದೆ.
ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ಎನ್ ಸಿಪಿ ಹಾಗೂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮೈತ್ರಿಕೂಟವಾದ ಮಹಾ ವಿಕಾಸ್ ಅಂಗಡಿ ಪ್ರಬಲ ಪೈಪೋಟಿ ನೀಡಿದ್ದರೂ ಬಹುಮತ ಪಡೆಯುವಲ್ಲಿ ವಿಫಲವಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಸಿಎನ್ ಎನ್ ಸಮೀಕ್ಷೆ ಪ್ರಕಾರ ಮಯುತಿಗೆ ೧೫೪ ಸ್ಥಾನ ಲಭಿಸಲಿದ್ದರೆ, ಮಹಾ ವಿಕಾಸ್ ಅಂಗಡಿಗೆ ೧೨೮ ಸ್ಥನ ಇತರೆ ೮-೧೦ ಸ್ಥಾನಗಳು ಲಭಿಸಲಿವೆ.
ಪಿ ಮಾರ್ಕ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಮಯುತಿ ಮೈತ್ರಿಕೂಟಕ್ಕೆ ೧೩೭-೧೫೭ ಮಹಾ ವಿಕಾಸ್ ಅಂಗಡಿಗೆ ೧೨೬-೧೪೬ ಹಾಗೂ ಇತರೆ ಪಕ್ಷಗಳಿಗೆ ೨-೮ ಸ್ಥಾನ ಲಭಿಸಲಿದ್ದರೆ, ಮಾರ್ಟಿಜ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಮಯುತಿಗೆ ೧೫೦-೧೭೦ ಮಹಾವಿಕಾಸ್ ಅಂಗಡಿಗೆ ೧೧೦-೧೩ ಮತ್ತು ಇತರರಿಗೆ ೮-೧೦ ಸ್ಥಾನಗಳು ಲಭಿಸುವ ಸಾಧ್ಯತೆ ಇದೆ.
೮೧ ಜಾರ್ಖಂಡ್ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಹುಮತ ಪಡೆಯಲು ೪೧ ಸ್ಥಾನಗಳ ಅಗತ್ಯವಿದ್ದು, ಎಲ್ಲಾ ಸಮೀಕ್ಷೆಗಳು ಎನ್ ಡಿಎ ಮೈತ್ರಿಕೂಟಕ್ಕೆ ೪೧ರಿಂದ ೪೫ ಸ್ಥಾನ ಸಿಗಬಹುದು ಎಂದು ಹೇಳಿದ್ದರೆ, ಇಂಡಿಯಾ ಮೈತ್ರಿಕೂಟಕ್ಕೆ ೨೫ರಿಂದ ೩೭ ಸ್ಥಾನ ದೊರೆಯಬಹುದು ಎಂದು ಹೇಳಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ