Slider

ಮಲ್ಪೆ: ದಕ್ಕೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಚೂರಿ ಇರಿತ..!

Udupifirst-udupinews

 


ಮಲ್ಪೆ: ಮೀನುಗಾರಿಕಾ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಚೂರಿ ಇರಿದು ಹಲ್ಲೆ ಮಾಡಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ.

ಮಂಜುನಾಥ್ ಎಂಬುವವರು ಸುಮಾರು 4 ವರ್ಷದಿಂದ ಮಲ್ಪೆ ಬಂದರಿನಲ್ಲಿ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿರುತ್ತಾರೆ, ಪ್ರತಿದಿನ ಊಟ ಮುಗಿದ ಬಳಿಕ ಬಾಪುತೋಟ ದಕ್ಕೆಯಲ್ಲಿ ನಿಂತಿರುವ ಸನ್ಮಾನ್‌ ಬೋಟಿನಲ್ಲಿ ಮಲಗಲು ಹೋಗುತ್ತಿದ್ದು ಅದರಂತೆ ನಿನ್ನೆ  ರಾತ್ರಿ ಊಟ ಮಾಡುವ ತಯಾರಿಯಲ್ಲಿರುವಾಗ ಸನ್ಮಾನ್‌ ಬೋಟಿನ ಕೆಲಸಗಾರ ಅನಿಲ್‌ ಎಂಬುವನು ಮಂಜುನಾಥ್ ಎಂಬುವವರಿಗೆ ಮದ್ಯ ಸೇವನೆ ಮಾಡಲು ಬರುವಂತೆ ತಿಳಿಸಿದ್ದು ಅದರಂತೆ ಮಂಜುನಾಥ್ ಸನ್ಮಾನ್‌ ಬೋಟಿಗೆ ಹೋಗಿದ್ದು, ಬೋಟಿನಲ್ಲಿ ಕೀರ್ತಿ, ಅನಿಲ್‌ ಮತ್ತು ಮಂಜುನಾಥ್ ಸೇರಿ ಮದ್ಯ ಸೇವನೆ ಮಾಡುತ್ತಿರುವಾಗ ರಾತ್ರಿ ಸಮಯ 10:30 ಗಂಟೆಗೆ ಅನಿಲ್‌ ಮತ್ತು ಕೀರ್ತಿ ರವರಿಗೆ ಬೋಟಿನಲ್ಲಿ ಕೆಲಸ ಮಾಡುವ ವಿಚಾರಕ್ಕೆ ಜಗಳ ಆಗಿರುತ್ತದೆ .

ಆ ಸಮಯ ಕೀರ್ತಿ ಎಂಬಾತನು ಬಿಯರ್‌ ಬಾಟಲಿಯಿಂದ ಅನಿಲ್‌ ಎಂಬುವನ ತಲೆ ಹೊಡೆದಿರುತ್ತಾನೆ ನಂತರ ಅನಿಲ್‌ ಬೋಟಿನ ಸ್ಟೇರಿಂಗ್‌ ಬಳಿಗೆ ಓಡಿ ಹೋಗಿ ಚಾಕುವನ್ನು ತಂದಿದ್ದು ಅಷ್ಟರಲ್ಲಿ ಕೀರ್ತಿ ಎಂಬಾತನು ಬೋಟಿನಿಂದ ಓಡಿ ಹೋಗಿರುತ್ತಾನೆ ಆ ಸಮಯ ಅನಿಲ್‌ ಚಾಕು ಸಮೇತ ಬಂದವನೆ ಮಂಜುನಾಥ್ ಅವರನ್ನು ಕೊಲ್ಲುವ ಉದ್ದೇಶದಿಂದ ಚಾಕುವನ್ನು ಕುತ್ತಿಗೆಯ ಎಡ ಭಾಗಕ್ಕೆ ಹಾಕಿರುತ್ತಾನೆ ಪಿರ್ಯಾಧಿದಾರರು ಕೂಡಲೇ ಬಲಕೈನಿಂದ ಚಾಕು ಹಿಡಿದು ತಪ್ಪಿಸಿಕೊಂಡಿದ್ದು ಇದರಿಂದ ಪಿರ್ಯಾಧಿದಾರರ ಕುತ್ತಿಗೆಯ ಎಡಭಾಗಕ್ಕೆ ಮತ್ತು ಬಲಕೈ ಹೆಬ್ಬರಳು ಹಾಗೂ ತೋರು ಬೆರಳಿನ ಮದ್ಯ ಭಾಗಕ್ಕೆ ರಕ್ತ ಗಾಯವಾಗಿರುತ್ತಾದೆ. 

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 156/2024 , ಕಲಂ:352, 109 BNS ನಂತೆ ಪ್ರಕರಣ ದಾಖಲಾಗಿರುತ್ತದೆ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo