Slider

ಪರಶುರಾಮ ಥೀಮ್ ಪಾರ್ಕ್ ಪ್ರಕರಣ: ಶಿಲ್ಪಿ ಕೃಷ್ಣ ನಾಯ್ಕ 7ದಿನ ಪೊಲೀಸ್ ಕಸ್ಟಡಿಗೆ

Udupinews







ಪರಶುರಾಮ ಥೀಮ್ ಪಾರ್ಕ್ ಪ್ರಕರಣ: ಶಿಲ್ಪಿ ಕೃಷ್ಣ ನಾಯ್ಕ 7ದಿನ ಪೊಲೀಸ್ ಕಸ್ಟಡಿಗೆ 


ಕಾರ್ಕಳ:  ಪರಿಶುರಾಮ ಥೀಮ್‌ ಪಾರ್ಕ್‌ನಲ್ಲಿ ಪರಶುರಾಮ ಮೂರ್ತಿ ನಿರ್ಮಾಣ ಮಾಡಿರುವ ಶಿಲ್ಪಿ, ಬೆಂಗಳೂರಿನ ಕೃಷ್‌ ಆರ್ಟ್‌ ವರ್ಲ್ಡ್‌ನ ಕೃಷ್ಣ ನಾಯ್ಕ ಅವರನ್ನು ಕಾರ್ಕಳ ನಗರ ಪೊಲೀಸರು ಸೋಮವಾರ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವರನ್ನು 7 ದಿನ ಪೊಲೀಸ್‌ ಕಸ್ಟಡಿಗೆ ನೀಡಿದೆ.

ಕೃಷ್ಣ ನಾಯ್ಕ ವಿರುದ್ಧ ಕೃಷ್ಣ ಶೆಟ್ಟಿ ಬಜಗೋಳಿ ಎಂಬುವರು ನೀಡಿದ್ದ ದೂರಿಗೆ ಸಂಬಂಧಿಸಿ 4ರಂದು ಕಾರ್ಕಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ವಾದ-ಪ್ರತಿವಾದ ಆಲಿಸಿದ ನ್ಯಾಯಾ ಧೀಶರು ಕೃಷ್ಣ ನಾಯ್ಕ ಅವರ ನಿರೀಕ್ಷಣಾ ಜಾಮೀನು ಆದೇಶವನ್ನು ನ.7ಕ್ಕೆ ಕಾಯ್ದಿರಿಸಿದ್ದರು. ನ.7ರಂದು ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು.

ಪೊಲೀಸರು ಭಾನುವಾರ ಕೃಷ್ಣ ನಾಯ್ಕ ಅವರನ್ನು ಪುದುಚೇರಿಯ ಮಾಹೆಯಲ್ಲಿ ಬಂಧಿಸಿದ್ದರು.









0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo