Slider

ಸರ್ಕಾರ ಬೀಳಿಸಲು ಬಿಜೆಪಿಯಿಂದ ಶಾಸಕರಿಗೆ 50 ಕೋಟಿ ಆಮಿಷ ; ಸಿಎಂ ಸಿದ್ದರಾಮಯ್ಯ ಹೇಳಿಕೆ ಹಸಿ ಸುಳ್ಳು: ತಮ್ಮ ಖುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಅವರೇ ತಮ್ಮ ಶಾಸಕರಿಗೆ ಬಿಜೆಪಿ ಹೆಸರಿನಲ್ಲಿ ಕೋಟಿ ರೂ. ಆಮಿಷ: ಮಾಜಿ ಸಚಿವ ಸುನಿಲ್ ಕುಮಾರ್ ಆರೋಪ

Udupinews

 






ಸರ್ಕಾರ ಬೀಳಿಸಲು ಬಿಜೆಪಿಯಿಂದ ಶಾಸಕರಿಗೆ 50 ಕೋಟಿ ಆಮಿಷ ; ಸಿಎಂ ಸಿದ್ದರಾಮಯ್ಯ ಹೇಳಿಕೆ ಹಸಿ ಸುಳ್ಳು: ತಮ್ಮ ಖುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಅವರೇ ತಮ್ಮ ಶಾಸಕರಿಗೆ ಬಿಜೆಪಿ ಹೆಸರಿನಲ್ಲಿ ಕೋಟಿ ರೂ. ಆಮಿಷ: ಮಾಜಿ ಸಚಿವ ಸುನಿಲ್ ಕುಮಾರ್ ಆರೋಪ 


ಕಾಂಗ್ರೆಸ್ ಸರ್ಕಾರ ಉರುಳಿಸಲು ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ 50ಕೋಟಿ ಆಮಿಷ ನೀಡಿರುವ  ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಮಾಜಿ ಸಚಿವ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ.  

ಈ ಬಗ್ಗೆ ಟ್ವೀಟ್ ಮಾಡಿರುವ ಅವರು "ಉಪಚುನಾವಣೆ ಫಲಿತಾಂಶಕ್ಕೆ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೀತಿಗೊಂಡಿದ್ದಾರೆ. ಪೀಠದಿಂದ ಪತನಗೊಳ್ಳುವ ಕನಸು ಬೀಳುತ್ತಿರುವುದರಿಂದ ಪದೇ ಪದೇ ಬೆಚ್ಚಿ ಬೀಳುತ್ತಿದ್ದಾರೆ. ನಿರಾಯಾಸವಾಗಿ ಸಿಕ್ಕಿದ ಮುಖ್ಯಮಂತ್ರಿ ಗಾದಿಯನ್ನು ತಮ್ಮದೇ ಪಕ್ಷದವರು ಇನ್ನು ಕೆಲವೇ ದಿನಗಳಲ್ಲಿ ಕಸಿದುಕೊಳ್ಳುತ್ತಾರೆ ಎಂಬ ವಾಸನೆ ಬಡಿಯುತ್ತಿದ್ದಂತೆ ಪ್ರತಿಪಕ್ಷದವರ ಹೆಗಲ ಮೇಲೆ ಬಂದೂಕು ಇಟ್ಟು ಸ್ವಪಕ್ಷೀಯರನ್ನು ಬೆದರಿಸಲು ಹೊರಟಿದ್ದಾರೆ ,  ನಮ್ಮ ಸರ್ಕಾರವನ್ನು ಬೀಳಿಸಲು ಬಿಜೆಪಿಯವರು ಶಾಸಕರಿಗೆ ತಲಾ ಐವತ್ತು ಕೋಟಿ ರೂ. ಆಮಿಷ ವೊಡ್ಡಿದ್ದರು ಎಂದು ಸಿದ್ದರಾಮಯ್ಯನವರು ಹೇಳಿರುವುದು ಹಸಿ ಸುಳ್ಳು. ಬಹುಶಃ ತಮ್ಮ ಖುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಅವರು ತಮ್ಮ ಶಾಸಕರಿಗೆ ಬಿಜೆಪಿ ಹೆಸರಿನಲ್ಲಿ ಕೋಟಿ ರೂ. ಆಮಿಷ ನೀಡುತ್ತಿರಬೇಕು. ಕಳೆದ ಒಂದುವರೆ ವರ್ಷದಿಂದ ಅನುದಾನವಿಲ್ಲದೇ ತತ್ತರಿಸಿ ಹೋಗಿರುವ ಕಾಂಗ್ರೆಸ್ ಶಾಸಕರನ್ನು ವಿಶ್ವಾಸದಲ್ಲಿ ಇಟ್ಟುಕೊಳ್ಳಬೇಕಿದ್ದರೆ ಸಿದ್ದರಾಮಯ್ಯನವರಿಗೆ ಈಗ ಇದಕ್ಕಿಂತ ಬೇರೆ ಮಾರ್ಗವೇ ಇಲ್ಲದಂತೆ ತೋರುತ್ತದೆ.

ಅದೆಲ್ಲದಕ್ಕಿಂತ ಹೆಚ್ಚಾಗಿ ನನ್ನನ್ನು ಮುಟ್ಟಿದರೆ‌ ಕರ್ನಾಟಕದ ಜನತೆ ಸುಮ್ಮನಿರುವುದಿಲ್ಲ ಎಂದು ಅವರು ಬಿಕ್ಕಳಿಸಿರುವುದು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಜನರನ್ನು ಎತ್ತಿಕಟ್ಟುವ ಲೆಕ್ಕಾಚಾರ. ಏಕೆಂದರೆ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ನೀಡಿದ ಗದ್ದುಗೆಯ ಗಡುವು ಮಗಿಯುತ್ತಾ ಬಂದಿದೆ. ಯಾರಾದರೂ ತಮ್ಮನ್ನು ಬಡಿದ್ದೆಬ್ಬಿಸುತ್ತಾರೆಂಬ ಭಯಕ್ಕೆ ಈಗ ಆಪರೇಷನ್ ಕಮಲದ ಭೂತವನ್ನು ಮುಂದೆ ಬಿಟ್ಟಿದ್ದಾರಷ್ಟೆ." ಎಂದು ಸಿಎಂ ಸಿದ್ದರಾಮಯ್ಯ ಆರೋಪದ ವಿರುದ್ಧ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.










0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo