Slider

ಹಿರಿಯಡ್ಕ : ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ: ಹಲವರ ಬಂಧನ

Udupi


 ಹಿರಿಯಡ್ಕ: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ವೇಳೆ ಹಿರಿಯಡ್ಕ ಪೊಲೀಸರು ದಾಳಿ ನಡೆಸಿ ಏಳು ಮಂದಿ ಆರೋಪಿಗಳನ್ನು ಬಂಧಿಸಿ, ಜೂಜಾಟಕ್ಕೆ ಬಳಸಿದ್ದ ಪರಿಕರ ವಶಕ್ಕೆ ಪಡಿಸಿಕೊಂಡಿರುವ ಘಟನೆ ಉಡುಪಿ ತಾಲೂಕು ಪೆರ್ಣಂಕಿಲದಲ್ಲಿ  ನಡೆದಿದೆ.

1. ವಿಜಯ ಪ್ರಕಾಶ್‌ , 2. ರಾಜೇಶ್‌, 3 ಗಣೇಶ, 4. ಮಹೇಶ, 5. ಮೆಲ್ವಿನ್, 6. ಭೋಜ, 7. ರವೀಂದ್ರ ಬಂಧಿತ ಆರೋಪಿಗಳು.

ಆರೋಪಿತರುಗಳ ಬಳಿ ಇದ್ದ ಕೋಳಿ ಅಂಕಕ್ಕೆ ಬಳಸಿದ 20 ಕೋಳಿ ಹುಂಜಗಳು ಹಾಗೂ ಆರೋಪಿತರುಗಳ ಬಳಿ ಇದ್ದ ನಗದು 14,640/- ರೂಪಾಯಿ ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo