ಸಾಂದರ್ಭಿಕ ಚಿತ್ರ |
ಸಾಂದರ್ಭಿಕ ಚಿತ್ರ |
ಮಲ್ಪೆ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮಲ್ಪೆಯಲ್ಲಿ ನಡೆದಿದೆ.
ಮಲ್ಪೆ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರು ಲೋಹಿತ್ ಕುಮಾರ್ ಸಿಎಸ್ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ತೊಟ್ಟಂ ಬಳಿ ಇರುವಾಗ ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ಒಂದು ವಾಹನವನ್ನು ತೊಟ್ಟಂ ಕಡೆಯಿಂದ ವಢಭಾಂಡೇಶ್ವರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವುದನ್ನು ಕಂಡು ಅನುಮಾನಗೊಂಡು ವಾಹನವನ್ನು ಹಿಂಬಾಲಿಸಿ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ್ದು ಚಾಲಕನು ವಾಹನವನ್ನು ಬಲರಾಮ ಸರ್ಕಲ್‌ಬಳಿ ನಿಲ್ಲಿಸಿ ವಾಹನದಿಂದ ಕೆಳಗೆ ಇಳಿದು ಓಡಿ ಹೋಗಿರುತ್ತಾನೆ.
ವಾಹನದ ಬಳಿ ಹೋಗಿ ಪರಿಶೀಲಿಸಲಾಗಿ ವಾಹನವು KA-70-4914 ನೇ ನಂಬ್ರದ ಟಿಪ್ಪರ್ ವಾಹನ ಆಗಿದ್ದು, ಟಿಪ್ಪರ್ ನ ಹಿಂಭಾಗದಲ್ಲಿ ನೋಡಿದ್ದು ಮರಳು ತುಂಬಿರುವುದು ಕಂಡು ಬಂದಿರುತ್ತದೆ. ಟಿಪ್ಪರ್ ಕ್ಯಾಬಿನ್ ಪರಿಶೀಲಿಸಲಾಗಿ ಮರಳು ಸಾಗಾಟ ಸಂಬಂಧಿಸಿದ ಯಾವುದೇ ಪರವಾನಗಿ ಕಂಡು ಬಂದಿರುವುದಿಲ್ಲ ಹಾಗೂ ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳು ಕಂಡು ಬಂದಿರುವುದಿಲ್ಲ. ಟಿಪ್ಪರ್ ನಲ್ಲಿ 3 ಯುನಿಟ್ ನಷ್ಟು ಮರಳು ಇರುತ್ತದೆ. ಟಿಪ್ಪರ್ ವಾಹನದ ಚಾಲಕ ಎಲ್ಲಿಂದಲೋ ಮರಳನ್ನು ಕಳವು ಮಾಡಿ ಟಿಪ್ಪರ್ ನಲ್ಲಿ ತುಂಬಿಸಿಕೊಂಡು ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 148/2024 , ಕಲಂ:303(2) BNS AND 4, 4A, 21 MMRD ACT ರಂತೆ ಪ್ರಕರಣ ದಾಖಲಾಗಿರುತ್ತದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ