Slider

ಬಾಂಗ್ಲಾದೇಶದಲ್ಲಿ ಹಿಂದೂ ಅರ್ಚಕ ಚಿನ್ಮೋಯ್‌ ಕೃಷ್ಣ ದಾಸ್‌ ಪರ ವಕೀಲನ ಹತ್ಯೆ

Udupi

 


ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ನಡುವೆ ಹಿಂದೂ ಅರ್ಚಕ ಚಿನ್ಮೋಯ್‌ ಕೃಷ್ಣ ದಾಸ್‌ ಅವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿದೆ. ಇದರ ಬೆನ್ನಲ್ಲೇ ಅವರ ಪರ ವಕೀಲನನ್ನು ಕೋರ್ಟ್‌ ಆವರಣದಲ್ಲೇ ಹತ್ಯೆ ಮಾಡಿರುವ ಆಘಾತಕಾರಿ ಸಂಗತಿ ವರದಿಯಾಗಿದೆ.

ವರದಿಗಳ ಪ್ರಕಾರ ಬಾಂಗ್ಲಾದೇಶದ ನ್ಯಾಯಾಲಯದ ಹೊರಗೆ ಭಾರೀ ಪ್ರತಿಭಟನೆ ನಡೆದಿದ್ದು, ಈ ವೇಳೆ ಚಿನ್ಮೋಯ್‌ ಕೃಷ್ಣ ದಾಸ್‌ ಅವರ ಪರ ವಕೀಲ ಸೈಫುಲ್‌ ಇಸ್ಲಾಂ ಅಲಿಫ್‌ ಅವರನ್ನು ಹತ್ಯೆ ಮಾಡಲಾಗಿದೆ.

ಚಿನ್ಮೋಯ್‌ ಅವರ ಬಂಧನವನ್ನು ವಿರೋಧಿಸಿ ಬಾಂಗ್ಲಾದೇಶದ ಚಟ್ಟೋಗ್ರಾಮ್‌ ನ್ಯಾಯಾಲಯದ ಹೊರಗೆ ಭಾರೀ ಜನಸಮೂಹ ಪ್ರತಿಭಟನೆ ನಡೆಸಿದೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾರೆ. ಕೃಷ್ಣದಾಸ್‌ ಅವರ ಬೆಂಬಲಿಗರನ್ನು ಬಂಧಿಸಿ ಜೈಲಿಗೆ ಸಾಗಿಸುತ್ತಿದ್ದ ವೇಳೆ ಅವರ ವ್ಯಾನ್‌ ಅನ್ನು ವಕೀಲ ತಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ವಕೀಲ ಸೈಫುಲ್‌ ಇಸ್ಲಾಂ ಅಲಿ ಹತ್ಯೆಯಾಗಿದ್ದಾರೆ.

ಇನ್ನು ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದಾಗ 7-8 ಜನರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo