ಅಲೆವೂರು: ಬೈಕ್‌ನಿಂದ ಬಿದ್ದು ಸಹಸವಾರೆ ಮೃತ್ಯು
ಮಣಿಪಾಲ: ಬೈಕ್ ಹಂಪ್ಸ್ ನ ಮೇಲೆ ಚಲಾಯಿಸಿದ ಪರಿಣಾಮ ಮಹಿಳೆಯೊಬ್ಬರು ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಅಲೆವೂರಿನಲ್ಲಿ ನಡೆದಿದೆ.
ಅಲೆವೂರು ಗ್ರಾಮದ ಗಣಪತಿಕಟ್ಟೆ ಸುಬೋಧಿನಿ ಶಾಲೆಯ ಹತ್ತಿರ ಹಾದುಹೋಗಿರುವ ಅಲೆವೂರು ರಾಂಪುರ ರಸ್ತೆಯಲ್ಲಿ ಬೈಕ್ ಸವಾರ ಅನಿಲ್ ರವರು ತನ್ನ ತಾಯಿ ಸುಶೀಲಾ (65) ಇವರನ್ನು ಕೂರಿಸಿಕೊಂಡು ರಾಂಪುರ ಕಡೆಯಿಂದ ಅಲೆವೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಶಾಲೆಯ ಬಳಿಯ ರಸ್ತೆಗೆ ಅಳವಡಿಸಿದ ಹಂಪ್ಸ್ ನ ಮೇಲೆ ಚಲಾಯಿಸಿದ ಪರಿಣಾಮ ಸುಶೀಲಾರವರು ಆಯತಪ್ಪಿ ರಸ್ತೆಗೆ ಬಿದ್ದಿದ್ದು ಅವರ ತಲೆಗೆ ತೀವ್ರಗಾಯವಾಗಿ ಗಾಯಗೊಂಡಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ಸುಶೀಲಾ ರವರು ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ