ಬ್ರಹ್ಮಾವರ: ಗಾಂಜಾ ಮಾರಾಟ ಯತ್ನ - ಮೂವರ ಬಂಧನ: ಆರೋಪಿಗಳಿಂದ 10ಕೆಜಿ ಗಾಂಜಾ ವಶಕ್ಕೆ
ಬ್ರಹ್ಮಾವರ : ಮುಂಬೈಯಿಂದ ತರಿಸಿಕೊಂಡಿರುವ ನಿಷೇದಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೂವರನ್ನು ಸೆನ್ ಪೊಲೀಸರು ಬಂಧಿಸಿದ್ದು, ಎಂಟು ಲಕ್ಷಕ್ಕೂ ಹೆಚ್ಚಿನ ಮೊತ್ತದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ ಕೆಜಿ ರೋಡ್ ಕ್ರಾಸ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮುಂಬೈಯಿಂದ ತರಿಸಿಕೊಂಡಿರುವ ನಿಷೇದಿತ ಮಾದಕ ವಸ್ತು ಗಾಂಜಾ ಹೊಂದಿದ್ದರು.
ಆರೋಪಿಗಳನ್ನು ಉಪ್ಪೂರಿನ ಸತ್ಯರಾಜ್ (32ವ), ಕೃಷ್ಣ (43 ವ) ಮತ್ತು ಶಕಿಲೇಶ್ (25) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 8,11,040 ರೂ ಮೌಲ್ಯದ 10 ಕೆ.ಜಿ, 138 ಗ್ರಾಂ ತೂಕದ ಗಾಂಜಾ, ಮೂರು ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ