ಬಿಲ್ಲವ ಹೆಣ್ಣು ಮಕ್ಕಳು ಹಾಗೂ ಹಿಂದು ಸಂಘಟನೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಅರಣ್ಯ ಅಧಿಕಾರಿ ವಜಾಗೊಳಿಸುವಂತೆ .ಸುನೀಲ್ ಕುಮಾರ್ ಆಗ್ರಹ
ಬಿಲ್ಲವ ಹೆಣ್ಣು ಮಕ್ಕಳು ಹಾಗೂ ಹಿಂದು ಸಂಘಟನೆಗಳ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿರುವ ಪುತ್ತೂರಿನ ಅರಣ್ಯ ಅಧಿಕಾರಿ ಸಂಜೀವ್ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಮಾಜಿ ಸಚಿವ ವಿ.ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಈ ಬಗ್ಗೆ ಆಗ್ರಹಿಸಿರುವ ಅವರು, ಸರ್ಕಾರಿ ಸೇವಾ ನಿಯಮಗಳನ್ನು ಉಲ್ಲಂಘಿಸಿ ಒಬ್ಬ ಅಧಿಕಾರಿ ಸಮುದಾಯ, ಸಂಘಟನೆ ಹಾಗೂ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತನಾಡುವುದು ನಾಗರಿಕ ಸಮುದಾಯ ತಲೆ ತಗ್ಗಿಸುವಂತದ್ದು.
ಈ ಬಗ್ಗೆ ಎಫ್‌ಐಆರ್ ದಾಖಲಿಸಿ ಪ್ರಕರಣ ಮುಗಿದಿದೆ ಎಂದು ಕಣ್ಣೊರೆಸುವ ತಂತ್ರ ಸಾಲುವುದಿಲ್ಲ ಎಂದು ಹೇಳಿದ್ದಾರೆ. ಅಧಿಕಾರಿಯ ಹದ್ದುಮೀರಿದ ವರ್ತನೆಯನ್ನು ಕ್ಷಮಿಸಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ಸೇವೆಯಿಂದಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ