Slider

ಹರಿಯಾಣದಲ್ಲಿ ಕಾಂಗ್ರೆಸ್ "ಕೈ" ಹಿಡಿದ ಮತದಾರ; ಜಮ್ಮು ಕಾಶ್ಮೀರದಲ್ಲಿ ಅತಂತ್ರ ; ಮತಗಟ್ಟೆ ಸಮೀಕ್ಷೆ ಪ್ರಕಟ

Udupinews

 



ಹರ್ಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದ ಮತದಾನ ಅಂತ್ಯಗೊಂಡಿದೆ. ಇದೀಗ ಮತಗಟ್ಟೆ ಸಮೀಕ್ಷೆಗಳು ಪ್ರಕಟಗೊಂಡಿದೆ. ಕಳೆದ 10 ವರ್ಷದಿಂದ ಹರ್ಯಾಣದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಈ ಬಾರಿ ಆಡಳಿತ ವಿರೋಧಿ ಅಲೆ ಹೊಡೆತ ನೀಡಿದೆ. ಹರ್ಯಾಣದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೇರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳುತ್ತಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಯತ್ತ ಮತದಾರ ಒಲವು ತೋರಿದ್ದಾನೆ. ಆದರೆ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಮತಗಚ್ಚೆ ಸಮೀಕ್ಷೆ ಭವಿಷ್ಯ ನುಡಿದಿದೆ.

ಹರ್ಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ಎರಡು ವಿಧಾನಸಭೆಯಲ್ಲಿ ಒಟ್ಟು 90 ಸ್ಥಾನಗಳಿವೆ. ಬಹುಮತ ಪಡೆಯಲು 46 ಸ್ಥಾನ ಗೆಲ್ಲಬೇಕಿದೆ. ಹರ್ಯಾಣದಲ್ಲಿ ಬಹುತೇಕ ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್‌ಗೆ 55 ರಿಂದ 62 ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಇನ್ನು ಆಡಳಿತರೂಢ ಬಿಜೆಪಿ ಭಾರಿ ಕುಸಿತ ಕಾಣಲಿದೆ ಎಂದಿದೆ. ಹರ್ಯಾಣದಲ್ಲಿ ಆಪ್ ಖಾತೆ ತೆರೆಯಲ್ಲ ಎಂದು ಸಮೀಕ್ಷೆ ಹೇಳುತ್ತಿದೆ.

ಹರ್ಯಾಣ ಚುನಾವಣೆ ಮ್ಯಾಟ್ರಿಝ್ ಮತಗಟ್ಟೆ ಸಮೀಕ್ಷೆ 

ಬಿಜೆಪಿ : 18 ರಿಂದ 24

ಕಾಂಗ್ರೆಸ್: 55 ರಿಂದ 62

ಜೆಜೆಪಿ +: 3 ರಿಂದ 6

ಐಎನ್‌ಎಲ್‌ಡಿ +: 2 ರಿಂದ 5

ಇತರರು: 2 ರಿಂದ 5

ಹರ್ಯಾಣ ಚುನಾವಣೆ ಪೀಪಲ್ಸ್ ಪ್ಲಸ್ ಮತಗಟ್ಟೆ ಸಮೀಕ್ಷೆ 

ಬಿಜೆಪಿ : 20- 32

ಕಾಂಗ್ರೆಸ್: 49-61

ಜೆಜೆಪಿ +: 0 -1

ಐಎನ್‌ಎಲ್‌ಡಿ +: 2 -3 

ಇತರರು: 3-5 

ಜಮ್ಮು ಮತ್ತು ಕಾಶ್ಮೀರ ಚುನಾವಣೆ ಇಂಡಿಯಾ ಟುಡೆ ಸಿವೋಟರ್ ಮತಗಟ್ಟೆ ಸಮೀಕ್ಷೆ

ಬಿಜೆಪಿ : 27 ರಿಂದ 31

ಕಾಂಗ್ರೆಸ್+: 11 ರಿಂದ 15

ಜೆಕೆ ಪಿಡಿಪಿ +: 0 ಯಿಂದ 2

ಇತರರು : 1

ಜಮ್ಮು ಮತ್ತು ಕಾಶ್ಮೀರ ಚುನಾವಣೆ ಪೀಪಲ್ಸ್ ಪ್ಲಸ್ ಮತಗಟ್ಟೆ ಸಮೀಕ್ಷೆ

ಬಿಜೆಪಿ : 23- 27 

ಕಾಂಗ್ರೆಸ್+: 46 -50 

ಜೆಕೆ ಪಿಡಿಪಿ +: 7 - 11

ಇತರರು : 4 -6














0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo