Slider


ನಂತೂರು: ಮೀನು ಸಾಗಿಸುವ ಕಂಟೇನರ್‌ ಸ್ಕೂಟರ್‌ಗೆ ಢಿಕ್ಕಿ : ಯುವತಿ ಸಾವು

Udupinews

 





ನಂತೂರು: ಮೀನು ಸಾಗಿಸುವ ಕಂಟೇನರ್‌ ಸ್ಕೂಟರ್‌ಗೆ ಢಿಕ್ಕಿ : ಯುವತಿ ಸಾವು 


ಮಂಗಳೂರು: ಮೀನು ಸಾಗಿಸುವ ಕಂಟೇನರ್ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಯುವತಿಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಂತೂರು ವೃತ್ತದ ಬಳಿ ಭಾನುವಾರ ಸಂಜೆ ನಡೆದಿದೆ.

ಮೃತರನ್ನು ಕೋಡಿಕಲ್ ನಿವಾಸಿ ಕ್ರಿಸ್ತಿ ಕ್ರಾಸ್ತಾ (27) ಎಂದು ಗುರುತಿಸಲಾಗಿದೆ. ಕ್ರಿಸ್ತಿ ಕ್ರಾಸ್ತಾ ಅವರು ಕೋಡಿಕಲ್ ವೆಲಂಕಣಿ ವಾರ್ಡಿನ ಸಿರಿಲ್ ಕ್ರಾಸ್ತಾ ಮತ್ತು ಸ್ಯಾಂಡ್ರಾ ಕ್ರಾಸ್ತಾ ದಂಪತಿಯ ಪುತ್ರಿ.

CLICK HERE SHOP NOW

ಮೃತ ಕ್ರಿಸ್ತಿಯವರು ನಂತೂರು ವೃತ್ತದಿಂದ ಪಂಪೈಲ್ ಕಡೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಮೀನು ಸಾಗಿಸುವ ಕಂಟೇನರ್ ಲಾರಿ ಡಿಕ್ಕಿ ಹೊಡೆದಿದೆ. ಚಾಲಕನ ಅಜಾಗರೂಕತೆ ಮತ್ತು ಅತಿ ವೇಗದ ಚಾಲನೆಯಿಂದಾಗಿ ಟಿಪ್ಪರ್ ಕ್ರಿಸ್ತಿ ಅವರ ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಈ ವೇಲೆ ಹಿಂದಿನ ಚಕ್ರಕ್ಕೆ ಸಿಲುಕಿದ ಕ್ರಿಸ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ಬಳಿಕ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.









0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo