ಕಾರ್ಕಳ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ
ಉಡುಪಿ: ಪ್ರಿಯತಮನ ಜೊತೆ ಸೇರಿಕೊಂಡು ಪತ್ನಿಯೇ ತನ್ನ ಪತಿಯನ್ನು ಸ್ಲೋ ಪಾಯ್ಸನ್ ನೀಡಿ ಕೊಲೆ ಮಾಡಿದ ಘಟನೆ ಉಡುಪಿಯ ಅಜೆಕಾರಿನಲ್ಲಿ ನಡೆದಿದೆ.ಪತ್ನಿ ಪ್ರತಿಮಾ ಮತ್ತು ಪ್ರಿಯಕರ ದಿಲೀಪ್ ಹೆಗ್ಡೆ ಎಂಬವರನ್ನು ಈಗ ಬಂಧಿಸಲಾಗಿದೆ.
ಪ್ರಿಯಕರ ದಿಲೀಪ್ ಜೊತೆ ಸೇರಿಕೊಂಡು ಪ್ರತಿಮಾ ಪತಿ ಬಾಲಕೃಷ್ಣ ಅವರನ್ನು ಸ್ಲೋ ಪಾಯ್ಸನ್ ನೀಡಿ ಕೊಲೆ ಮಾಡಿದ್ದಾಳೆ. ಸ್ಲೋ ಪಾಯ್ಸನ್ ನೀಡಿದ್ದರಿಂದ ಕಳೆದ ಎರಡು ವಾರಗಳಿಂದ ಬಾಲಕೃಷ್ಣ ಅಸ್ವಸ್ಥರಾಗಿದ್ದರು.
ಬಾಲಕೃಷ್ಣ ತೀವ್ರ ವಾಕರಿಕೆ, ಜ್ವರ ಮುಂತಾದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಣಿಪಾಲ್, ನಿಮ್ಹಾನ್ಸ್ ಸೇರಿದಂತೆ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿರಲಿಲ್ಲ. ಕೊನೆಗೆ ಬಾಲಕೃಷ್ಠ ಅವರನ್ನು ಮನೆಗೆ ಕರೆತರಲಾಗಿತ್ತು. ಆದರೆ ಅಕ್ಟೋಬರ್ 20 ರ ತಡರಾತ್ರಿ ಬಾಲಕೃಷ್ಣ ಉಸಿರುಗಟ್ಟಿಸಿ ಪ್ರತಿಮಾ, ದಿಲೀಪ್ ಸೇರಿಕೊಂಡು ಹತ್ಯೆ ಮಾಡಿದ್ದರು.
ಬಳಿಕ ಸಂಶಯಗೊಂಡ ಬಾಲಕೃಷ್ಣ ಮನೆಯವರು ಪ್ರತಿಮಾ ವಿರುದ್ಧ ದೂರು ನೀಡಿದ್ದರು. ಅದರಂತೆ ತನಿಖೆ ನಡೆಸಿದಾಗ ಪತ್ನಿಯೇ ಪ್ರಿಯಕರನ ಜೊತೆ ಸೇರಿಕೊಂಡು ಹತ್ಯೆ ಮಾಡಿರುವ ವಿಚಾರ ಬೆಳಕಿಗೆ ಬಂದಿತ್ತು. ಇದೀಗ ಇಬ್ಬರನ್ನೂ ಖಾಕಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ