Slider

ಉಡುಪಿ: ದಾಳಿ ಹೆಸರಲ್ಲಿ ಹಣ ಪಡೆದು ವಂಚನೆ; ಸಾರ್ವಜನಿಕರು ಮುಂಜಾಗ್ರತೆ ವಹಿಸಿ

Udupi

 




ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಗರಸಭೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಹೆಸರಲ್ಲಿ ಅನಧಿಕೃತವಾಗಿ ಉದ್ದಿಮೆ ಪರವಾನಿಗೆ, ಪ್ಲಾಸ್ಟಿಕ್ ರೈಡ್‌ಗಳನ್ನು ನಡೆಸಿ ಹಣ ಪಡೆದು ವಂಚಿಸುತ್ತಿರುವ ಪ್ರಕರಣಗಳು ಕಂಡು ಬಂದಿದ್ದು, ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಲುವಾಗಿ ನಗರಸಭಾ ವ್ಯಾಪ್ತಿಯಲ್ಲಿ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಗುರುತಿನ ಚೀಟಿಯೊಂದಿಗೆ ಬಂದಲ್ಲಿ ಮಾತ್ರ ಯಾವುದೇ ಉದ್ದಿಮೆ ಪರವಾನಿಗೆ ಸಮೀಕ್ಷೆ, ಪ್ಲಾಸ್ಟಿಕ್ ಕಾರ್ಯಾಚರಣೆಗೆ ಅಂಗಡಿ ಮಾಲೀಕರು ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಯಾವುದೇ ವ್ಯಕ್ತಿಗಳು ನಗರಸಭೆಯ ಹೆಸರಿನಲ್ಲಿ ವಂಚಿಸಿದಲ್ಲಿ ಅದಕ್ಕೆ ನಗರಸಭೆಯು ಜವಾಬ್ದಾರಿಯಾಗಿರುವುದಿಲ್ಲ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.











0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo