Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಮುಡಾ ಕಡತಗಳನ್ನು ಸುಟ್ಟುಹಾಕಿದ ಸಚಿವ ಭೈರತಿ ಸುರೇಶ್‌ರನ್ನು ತಕ್ಷಣ ಬಂಧಿಸಿ: ಶೋಭಾ ಕರಂದ್ಲಾಜೆ ಆಗ್ರಹ

Udupinews






ಮುಡಾ ಕಡತಗಳನ್ನು ಸುಟ್ಟುಹಾಕಿದ ಸಚಿವ ಭೈರತಿ ಸುರೇಶ್‌ರನ್ನು ತಕ್ಷಣ ಬಂಧಿಸಿ: ಶೋಭಾ ಕರಂದ್ಲಾಜೆ ಆಗ್ರಹ 



ಬೆಂಗಳೂರು : ನಗರಾಭಿವೃದ್ಧಿ ಮಂತ್ರಿ ಬೈರತಿ ಸುರೇಶ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಮೈಸೂರು ನಗರಾಭಿವೃದ್ಧಿ ಕಡತಗಳ ರಹಸ್ಯ ಬಯಲಾಗಲಿದೆ. ಮುಡಾ ಕಚೇರಿಯಿಂದ ಎಷ್ಟು ಕಡತಗಳನ್ನು ಹೊತ್ತುಕೊಂಡು ಬಂದರು, ಎಲ್ಲಿ ಸುಟ್ಟು ಹಾಕಿದರು ಎನ್ನುವುದು ತಿಳಿಯಲು ತನಿಖಾ ಸಂಸ್ಥೆಗಳು ಅವರನ್ನು ಕೂಡಲೇ ಬಂಧಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಲಭ್ಯ ಮಾಹಿತಿ ಪ್ರಕಾರ ಅಕ್ರಮ ಹೊರ ಬಂದ ನಂತರ ಮುಡಾ ಕಚೇರಿಗೆ ತರಾತುರಿಯಲ್ಲಿ ಬೈರತಿ ಸುರೇಶ್ ತೆರಳಿದ್ದರು. 1997ರಿಂದ ಕಚೇರಿಯಲ್ಲಿದ್ದ ಕಡತಗಳನ್ನು ಎತ್ತಿಕೊಂಡು ಬಂದು, ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿದರು.

ಶುದ್ಧರಾಮಯ್ಯ ಎಂದು ಹೇಳಿಕೊಳ್ಳುತ್ತಿದ್ದ‌ ಸಿದ್ದರಾಮಯ್ಯ ಅವರ ಮುಖವಾಡ ಕಳಚಿ ಬಿದ್ದಿದೆ. ಒಂದಲ್ಲ ಮೂರು ಪ್ರಕರಣಗಳು ಭ್ರಷ್ಟಾಚಾರ ಬಯಲುಗೊಳಿಸಿವೆ. ಅಷ್ಟೇ ಅಲ್ಲ ಹೈಕೋರ್ಟ್ , ಅಧೀನ ನ್ಯಾಯಾಲಯಗಳಿಂದ ಛೀಮಾರಿ ಹಾಕಿವೆ. ತನಿಖೆಗೂ ಆದೇಶಿಸಿರುವ ಕಾರಣ ಅವರೀಗ ಅಪರಾಧಿ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ಮಾಡಿದರು.








0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo