ಕುಂದಾಪುರ: ನಕಲಿ ವೀಸಾ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಮ್ಮಾಡಿ ಗ್ರಾಮದ ಜೋಸೆಫ್ ಡಿಸೋಜ ಎಂಬವರ ಮಗ ಪ್ರಜ್ವಲ್ ಡಿಸೋಜ ವಿದೇಶದಲ್ಲಿ ಉದ್ಯೋಗಕ್ಕೆ ಹೋಗುವ ನಿಟ್ಟಿನಲ್ಲಿ ರಾಬರ್ಟ್ ವಿಲ್ಸನ್ ಎಂಬವರನ್ನು ಸಂಪರ್ಕಿಸಿ ವೀಸಾ ಪಡೆಯುವ ಬಗ್ಗೆ ಮಾತುಕತೆ ನಡೆಸಿದ್ದರು. ಆ ಸಮಯ ರಾಜೇಶ್ ಎಂಬಾತನು ವೀಸಾ ಮಾಡಿಸಿ ಕೊಡುವುದಾಗಿ ಹೇಳಿದ್ದನು. ಆದರಂತೆ ವೀಸಾ ಮಾಡಿಸಿ ಕೊಡಲು ಅನಿತಾ ಎಂಬಾಕೆ ಜೋಸೇಫ್ ಒಟ್ಟು 1,17000ರೂ. ಹಣ ಪಾವತಿಸಿದ್ದರು.
ನಂತರ ಆರೋಪಿಗಳು ವಿಸಿಟಿಂಗ್ ವೀಸಾವನ್ನು ಕಳುಹಿಸಿದ್ದು, ಆ ವೀಸಾ ಪಡೆದು ಪ್ರಜ್ವಲ್ ಡಿಸೋಜ ಸೆ.18ರಂದು ವಿದೇಶಕ್ಕೆ ಹೋಗಲು ಮುಂಬೈ ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಅಲ್ಲಿ ಅಧಿಕಾರಿಗಳು ವೀಸಾವನ್ನು ಪರಿಶೀಲಿಸಿದಾಗ ನಕಲಿ ವೀಸಾ ಎಂದು ಪರಿಗಣಿಸಿ ಪ್ರಜ್ವಲ್‌ನನ್ನು ವಾಪಾಸ್ಸು ಕಳುಹಿಸಿದ್ದರು ಎಂದು ದೂರಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ