ರವಿವಾರ ಮುಂಜಾನೆ ನಾಪತ್ತೆಯಾಗಿದ್ದ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಸಹೋದರ, ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್‌ಮನ್ ಮಮ್ತಾಜ್ ಅಲಿ ಅವರ ಮೃತದೇಹ ಪತ್ತೆಯಾಗಿದೆ.
ಕೂಳೂರು ಸೇತುವೆಯ ಕೆಳಗೆ ಮಮ್ತಾಜ್ ಅಲಿ ಮೃತದೇಹ ಪತ್ತೆಯಾಗಿದೆ. ರಕ್ಷಣಾ ತಂಡಗಳು ರವಿವಾರ ಬೆಳಗ್ಗಿನಿಂದ ಹುಡುಕು ಕಾರ್ಯಾಚರಣೆ ನಡೆಸುತ್ತಿದ್ದವು.ಮಮ್ತಾಜ್ ಅವರು ರವಿವಾರ ಮುಂಜಾನೆ ಹೊಚ್ಚ ಹೊಸ ಬಿಎಂಡಬ್ಲ್ಯು ಕಾರು ಕೂಳೂರು ಸೇತುವೆಯ ಬಳಿ ಅಪಘಾತಕ್ಕೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೊಬೈಲ್, ಕಾರಿನ ಕೀ ಅಲ್ಲಿಯೇ ಇದ್ದ ಕಾರಣ ಆತ್ಮಹತ್ಯೆ ಮಾಡಿರುವ ಶಂಕೆಯಲ್ಲಿ ಹುಡುಕಾಟ ಆರಂಭಿಸಲಾಗಿತ್ತು.
ಸೇತುವೆ ಆಸುಪಾಸಿನಲ್ಲಿ ಮುಳುಗುತಜ್ಞ ಈಶ್ವರ ಮಲ್ಪೆ ಸಹಿತ 7 ಸ್ಕೂಬಾ ಡೈವರ್‌ಗಳು, ಎನ್‌ಡಿಆರ್‌ಎಫ್ ತಂಡ ಹುಡುಕಾಟ ನಡೆಸುತ್ತಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ