ಕುಂದಾಪುರ ಮೂಲದ ವಿವಾಹಿತ ಮಹಿಳಾ ಟೆಕ್ಕಿ ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೇಘನಾ ಶೆಟ್ಟಿ (27) ಎನ್ನುವ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮೇಘನಾ ಶೆಟ್ಟಿ ಉಡುಪಿ ಜಿಲ್ಲೆಯ ವರು ಎಂದು ತಿಳಿದುಬಂದಿದೆ.ಮೃತ ಮೇಘನಾ ಪೋಷಕರಿಂದ ಇದು ಕೊಲೆ ಎಂದು ಆರೋಪಿಸುತ್ತಿದ್ದಾರೆ.
ಎರಡು ವರ್ಷದ ಹಿಂದೆ ತೀರ್ಥಹಳ್ಳಿಯ ಸುದೀಪ್-ಶೆಟ್ಟಿ ಜೊತೆ ಮೇಘನಾ ವಿವಾಹವಾಗಿತ್ತು. ಮೇಘನಾ ಶೆಟ್ಟಿ ಪತಿ ಸುದೀಪ್ ಸಹ ಇಂಜಿನಿಯರ್ ಆಗಿದ್ದಾರೆ.
ಇತ್ತೀಚೆಗೆ ಪದೇಪದೇ ಹಣಕ್ಕಾಗಿ ಪತಿ ಕುಟುಂಬದಿಂದ ಕಿರುಕುಳ ಆರೋಪ ಕೇಳಿ ಬಂದಿದೆ. ನಿನ್ನೆ ರಾತ್ರಿ ಕೂಡ ಇದೇ ವಿಚಾರಕ್ಕೆ ದಂಪತಿಯ ನಡುವೆ ಗಲಾಟೆ ನಡೆದಿತ್ತು. ಆದರೆ ಇಂದು ಬೆಳಿಗ್ಗೆ ಕಿಟಕಿಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮೇಘನಾ ಶವ ಪತ್ತೆಯಾಗಿದೆ.ಮೇಘನಾ ಪೋಷಕರಿಂದ ಪತಿ ಸುದೀಪ್ ಶೆಟ್ಟಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ವಿವೇಕನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ