ನೂತನ ಶಾಖೆಯನ್ನು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಗಿರಿಜಾ ಹೆಲ್ತ್‌ಕೇರ್ ಸರ್ಜಿಕಲ್ಸ್‌ನ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದು ಸಂಸ್ಥೆಯ ಯಶಸ್ಸಿಗಾಗಿ ಶುಭಹಾರೈಸಿದರು.
ಗಿರಿಜಾ ಸರ್ಜೀಕಲ್ಸ್‌ನ ಮುಖ್ಯಸ್ಥ ರವೀಂದ್ರ ಕೆ. ಶೆಟ್ಟಿ ಮಾತನಾಡಿ ಮಂಗಳೂರಿನಲ್ಲಿ ಗಿರಿಜಾ ಸರ್ಜಿಕಲ್ಸ್ ಎರಡನೇ ಶಾಖೆ ತೆರೆದಿದ್ದು , ಈಗಾಗಲೇ ಉಡುಪಿ, ಕುಂದಾಪುರದಲ್ಲಿ ಎರಡು ಶಾಖೆ ಕಾರ್ಯಾಚರಿಸುತ್ತಿವೆ ,ಮುಂದಿನ ದಿನಗಳಲ್ಲಿ ಕೇವಲ ಜಿಲ್ಲೆ ಮಾತ್ರವಲ್ಲ ರಾಜ್ಯಾದ್ಯಂತ ಗಿರಿಜಾ ಸರ್ಜಿಕಲ್ಸ್ ಸೇವೆ ನೀಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತುಳು ಹಾಸ್ಯ ನಟ ಅರವಿಂದ್ ಬೋಳಾರ್, ಡೈಜಿವರ್ಲ್ಡ್ ಮಾಧ್ಯಮ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಬಿಜೆಪಿ ವಕ್ತಾರ ರಾಜ್‌ಗೋಪಾಲ್ ರೈ, ನಮ್ಮ ಕುಡ್ಲ ಸಂಸ್ಥಾಪಕ ಲೀಲಾಕ್ಷ ಕರ್ಕೇರಾ, ಗಿರಿಜಾ ಹೆಲ್ತ್‌ಕೇರ್ ಸರ್ಜಿಕಲ್ಸ್‌ನ ಪಾಲುದಾರರಾದ ಸುರೇಖಾ ಶೆಟ್ಟಿ, ಹರೀಶ್ ಕುಮಾರ್, ಮನಪಾ ಸದಸ್ಯೆ ಲೀಲಾವತಿ ಪ್ರಕಾಶ್, ಸಾನೂ ಪ್ಯಾಲೇಸ್ ಮಾಲಕ ಗುರು ,ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ