ಯಡಿಯೂರಪ್ಪ ಪತ್ನಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರ: ಸಚಿವ ಭೈರತಿ ಸುರೇಶ್ ಗಂಭೀರ ಆರೋಪ
ಮುಡಾ ಪ್ರಕರಣದಲ್ಲಿ ಭೈರತಿ ಸುರೇಶ್ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಹೇಳುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಬಿ.ಎಸ್.ಯಡಿಯೂರಪ್ಪ ಅವರ ಪತ್ನಿ ಸಾವು ಹೇಗಾಯಿತು ಎಂದು ಮೊದಲು ಉತ್ತರಿಸಲಿ ಅಂತಾ ಸಚಿವ ಭೈರತಿ ಸುರೇಶ್ ತಿರುಗೇಟು ನೀಡಿದರು.
ಮುಡಾ ದಾಖಲೆಯನ್ನು ಫ್ಲೈಟ್ನಲ್ಲಿ ಕದ್ದೊಯ್ದು ಸುಟ್ಟು ಹಾಕಲಾಗಿದೆ. ಇದರಲ್ಲಿ ಸುರೇಶ್ ಅವರನ್ನು ಬಂಧಿಸಬೇಕು ಎಂದು ಶೋಭಾ ಇ.ಡಿ.ಗೆ ಆಗ್ರಹಿಸಿದ್ದರು. ಶೋಭಾರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಭೈರತಿ ಸುರೇಶ್, ಮುಡಾ ಕಚೇರಿಯಲ್ಲಿ ಸಿಸಿಟಿವಿ ಇರುತ್ತದೆ. ಮುಡಾ ಯಾವುದೇ ಕಡತ ನಾನು ತಂದಿಲ್ಲ. ಕೇಂದ್ರ ಸಚಿವೆಯಾಗಿ ಗಾಳಿಯಲ್ಲಿ ಗುಂಡುಹಾರಿಸುವುದನ್ನು ಬಿಡಲಿ ಎಂದು ಕುಟುಕಿದರು.
ಈಯಮ್ಮ ಹೇಳಿದಂತೆ .ಇಡಿ.ಯವರು ಕೇಳುತ್ತಾರಾ ಎಂದು ಸುರೇಶ್, ನನಗೂ ಶೋಭಾ ಅವರ ಬಗ್ಗೆ ಅನುಮಾನವಿದೆ. ಯಡಿಯೂರಪ್ಪ ಅವರ ಪತ್ನಿಯ ಸಾವು ಹೇಗಾಯಿತು ಅಂತಾ ಕೇಳುತ್ತಿದ್ದೇನೆ. ಬಿಎಸ್ವೈ ಪತ್ನಿ ಸಾವಿನ ತನಿಖೆ ಆಗಿ ಶೋಭಾರನ್ನು ಬಂಧಿಸಲಿ ಎಂದು ಸುರೇಶ್ ಟಾಂಗ್ ನೀಡಿದ್ದಾರೆ. ಸುಳ್ಳು ಆರೋಪ ಮಾಡುವ ಬದಲು ಧರ್ಮಸ್ಥಳ, ಚಾಮುಂಡಿ ದೇವಿಯ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲ್ ಹಾಕಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ