Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ: ನ.5ರಿಂದ ಚಿಟ್ಟಾಣಿ ಸಪ್ತಾಹ

Udupinews

 






ಉಡುಪಿ: ನ.5ರಿಂದ ಚಿಟ್ಟಾಣಿ ಸಪ್ತಾಹ 


ಉಡುಪಿ: ಕಳೆದ 16 ವರ್ಷಗಳಿಂದ ಚಿಟ್ಟಾಣಿ ಅಭಿಮಾನಿ ಬಳಗ ಆಯೋಜಿಸುತ್ತಾ ಬಂದ ಚಿಟ್ಟಾಣಿ ಸಪ್ತಾಹವು ಈ ವರ್ಷ ನವೆಂಬರ್ 5ರಿಂದ 11ರವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಲಿದೆ.

ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮ ವನ್ನು ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ನ.5 ರಂದು ಸಂಜೆ 6:30ಕ್ಕೆ ಉದ್ಘಾಟಿಸಲಿದ್ದಾರೆ.

ವೀರಾಂಜನೇಯ ಯಕ್ಷಮಿತ್ರ ಮಂಡಳಿ ಮತ್ತು ಅತಿಥಿ ಕಲಾವಿದರ ಸಹಯೋಗದಲ್ಲಿ ಪ್ರತೀ ದಿನ ಸಂಜೆ 6:30ಕ್ಕೆ ಆರಂಭ ಗೊಳ್ಳುವ ಚಿಟ್ಟಾಣಿ ಸಂಸ್ಮರಣಾ ಸಪ್ತಾಹದಲ್ಲಿ ಅನುಕ್ರಮವಾಗಿ ಶ್ರೀಮತಿ ಪರಿಣಯ, ಪಟ್ಟಾಭಿಷೇಕ, ಸತ್ಯಹರಿಶ್ಚಂದ್ರ, ಧರ್ಮಾಂಗದ ದಿಗ್ವಿಜಯ, ನೃಗರಾಜ ಚರಿತ್ರೆ, ತರಣಿಸೇನ ಕಾಳಗ, ದಕ್ಷಯಜ್ಞ ಮತ್ತು ಶ್ವೇತಕುಮಾರ ಚರಿತ್ರೆ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ ಎಂದು ಅಭಿಮಾನಿ ಬಳಗದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಎಂ. ಗೋಪಿಕೃಷ್ಣ ರಾವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.










0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo