ಜಾತಿ ಗಣತಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೇ ಇದೆ. ಅದನ್ನ ಜಾರಿಗೊಳಿಸಲು ಸರ್ಕಾರ ಯಾಕೆ ಯೋಚನೆ ಮಾಡುತ್ತಿದೆ? ಜಾತಿ ಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅನ್ನೋದಾದ್ರೆ ಹೋಗಲಿ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಜಾತಿ ಗಣತಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇದೆ. ಆದ್ರೆ ಸರ್ಕಾರ ಯಾಕೆ ಯೋಚನೆ ಮಾಡುತ್ತಿದೆ? ಮೊದಲು ಜಾತಿ ಗಣತಿ ಜಾರಿಮಾಡಲಿ. ಇದರಿಂದ ಎಲ್ಲ ಸಮುದಾಯಕ್ಕೂ ಅನಕೂಲ ಇದೆ. ಜಾತಿ ಗಣತಿ ಜಾರಿಯಿಂದ ಸರ್ಕಾರ ಹೋಗುತ್ತೆ ಅಂದ್ರೆ ಹೋಗಲಿ ಎಂದು ನುಡಿದಿದ್ದಾರೆ.
ರಾಹುಲ್ ಗಾಂಧಿ, ಪಕ್ಷದ ಪ್ರಣಾಳಿಕೆ ಬಗ್ಗೆ ಗೌರವ ಇರುವವರು ಇದಕ್ಕೆ ಬೆಂಬಲ ಕೋಡಬೇಕು. ಕಾಂಗ್ರೆಸ್ ಪಕ್ಷದ ಪ್ರಣಾಳಿಯಲ್ಲಿ ಜಾತಿಗಣತಿ ಜಾರಿ ಬಗ್ಗೆ ಹೇಳಿದ್ದಾರೆ. ಪ್ರಪಂಚ ಬಿದ್ರೂ ಜಾತಿಗಣತಿ ಜಾರಿಯಾಗಬೇಕು ಅಂತ ಮಲ್ಲಿಕಾರ್ಜುನ ಖರ್ಗೆ , ರಾಹುಲ್ ಗಾಂಧಿ ಸಹ ಹೇಳಿದ್ದಾರೆ. ಹಾಗಾಗಿ, ಪ್ರಪಂಚ ತಲೆ ಕೆಳಗಾಗಲಿ, ಜಾತಿ ಜನಗಣತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ