Slider


ಉಡುಪಿ: ಶ್ರೀರಾಮಸೇನೆ ಜಿಲ್ಲಾಧ್ಯಕ್ಷರಾಗಿ ಸುದರ್ಶನ್ ಪೂಜಾರಿ

Udupinews

 





ಉಡುಪಿ: ಶ್ರೀರಾಮಸೇನೆ ಜಿಲ್ಲಾಧ್ಯಕ್ಷರಾಗಿ ಸುದರ್ಶನ್ ಪೂಜಾರಿ 


ಉಡುಪಿ: ಉಡುಪಿ ಜಿಲ್ಲಾ ಶ್ರೀರಾಮಸೇನೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಜೊತೆಗೆ ದತ್ತ ಪೀಠ ಹಾಗೂ ಪ್ರಮುಖ ವಿಷಯಗಳ ಬಗ್ಗೆ ಉಡುಪಿಯ ಮಥುರಾ ಹೋಟೆಲ್ ಕಂಫರ್ಟ್ಸ್ ನ ಸಭಾಂಗಣದಲ್ಲಿ ದಿನಾಂಕ 20 ರ ಆದಿತ್ಯವಾರ ಕಾರ್ಯಕ್ರಮ ನಡೆಯಿತು.

ಉಡುಪಿ ಜಿಲ್ಲಾ ಶ್ರೀರಾಮಸೇನೆಯ ನೂತನ ಅಧ್ಯಕ್ಷರಾಗಿ ಸುಧರ್ಶನ್ ಪೂಜಾರಿ, ಕಾರ್ಯಧ್ಯಕ್ಷರಾಗಿ ಶರತ್ ಮಣಿಪಾಲ, ಸಂಘಟನಾ ಕಾರ್ಯದರ್ಶಿಯಾಗಿ ಸುದೀಪ್ ನಿಟ್ಟೂರು, ಸಂಪರ್ಕ್ ಪ್ರಮುಖ್ ಆಗಿ ಸುಜಿತ್ ಏನ್, ಕಾರ್ಯದರ್ಶಿಯಾಗಿ ಜಿಲ್ಲಾ ನಿತೇಶ್, ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ರಾಕೇಶ್ ಪೂಜಾರಿ ನಿಟ್ಟೂರು, ನಗರ ಅಧ್ಯಕ್ಷರಾಗಿ ನರೇಂದ್ರ ನಿಟ್ಟೂರು, ಪ್ರ. ಕಾರ್ಯದರ್ಶಿಯಾಗಿ ಜೀವನ್ ಪೂಜಾರಿ, ಮಣಿಪಾಲ ಘಟಕ ಪ್ರಮುಖ್ ಆಗಿ ಪ್ರವೀಣ್ ಪೂಜಾರಿ ಯವರನ್ನು ಸಂಘಟನೆಯ ರಾಜ್ಯ ಪ್ರ. ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್ ನೇಮಕ ಮಾಡಿ ಜವಾಬ್ದಾರಿ ಘೋಷಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ವಿಭಾಗಧ್ಯಕ್ಷ ಮಧುಸೂದನ್, ಕಾರ್ಯಧ್ಯಕ್ಷ ಜಯರಾಂ ಅಂಬೆಕಲ್ಲು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.








0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo