ಮಂಗಳೂರು: ನಗರದ ಪೋಲಿಸರು ಅತಿ ದೊಡ್ಡ ಕಾರ್ಯಾಚರಣೆ ನಡೆಸಿದ್ದು. ಸುಮಾರು 6ಕೆಜಿ 300ಗ್ರಾಂನಷ್ಟು ಡ್ರಗ್ಸ್‌ನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಸಿಸಿಬಿ ಪೋಲಿಸರಿಂದ ಅತ್ಯಂತ ದೊಡ್ಡ ಕಾರ್ಯಚರಣೆ ನಡೆದಿದ್ದು. ಇದು ಮಂಗಳೂರು ಪೋಲಿಸ್ ಇಲಾಖೆಯ ಇತಿಹಾಸದಲ್ಲೆ ಅತ್ಯಂತ ದೊಡ್ಡ ಕಾರ್ಯಚರಣೆ ಎಂದು ಬಣ್ಣಿಸಲಾಗಿದೆ.
ಬೆಂಗಳೂರಿನ ದೊಮ್ಮಸಂದ್ರದ ವಿವೇಕಾನಂದ ನಗರದಲ್ಲಿ ವಾಸವಿರುವ ಪೀಟರ್ ಇಕೆಡಿ ಬೆಲೊನ್ವು(38) ಎಂಬ ನೈಜೀರಿಯಾ ಪ್ರಜೆ ಬಂಧಿತ ಆರೋಪಿ ಸೆಪ್ಟೆಂಬರ್ 29ರಂದು ನಗರದ ಪಂಪ್‌ವೆಲ್ ಬಳಿ ಎಂಡಿಎಂಎ ಮಾದಕದ್ರವ್ಯವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ತೊಕ್ಕೊಟ್ಟು, ಪರ್ಮನ್ಬೂರು ನಿವಾಸಿ ಹೈದರ್ ಅಲಿ(51) ಎಂಬಾತನನ್ನು ಬಂಧಿಸಿ 75,000ರೂ.ಮೌಲ್ಯದ 15ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದರು. ಪ್ರಕರಣದ ತನಿಖೆಯನ್ನು ಮಂಗಳೂರು ಸಿಸಿಬಿ ಘಟಕಕ್ಕೆ ಹಸ್ತಾಂತರಿಸಲಾಗಿತ್ತು. ಸಿಸಿಬಿ ಪೊಲೀಸರು ಮಾದಕದ್ರವ್ಯ ಪೂರೈಕೆ ಮಾಡುವ ಡ್ರಗ್ಸ್ ಪೆಡ್ಲರ್‌ಗಳ ಹಿಂದೆ ಬಿದ್ದು ತನಿಖೆ ಕೈಗೊಂಡಿದ್ದರು. ಆಗ ಮಾದಕದ್ರವ್ಯ ಪೂರೈಕೆ ಮಾಡುವ ವ್ಯಕ್ತಿ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ನೈಜೀರಿಯಾ ದೇಶದ ಪ್ರಜೆ ಎಂದು ತಿಳಿದುಬಂದಿದೆ.
ಅದರಂತೆ ಸಿಸಿಬಿ ಪೊಲೀಸರು ಬೆಂಗಳೂರು ನಗರದ ದೊಮ್ಮಸಂದ್ರ ವಿವೇಕಾನಂದ ನಗರದ ಬಾಡಿಗೆ ಮನೆಗೆ ದಾಳಿ ನಡೆಸಿ ಮಾದಕವಸ್ತು ಹೊಂದಿದ್ದ ನೈಜೀರಿಯಾ ಪ್ರಜೆಯನ್ನು ಬಂಧಿಸಿದ್ದಾರೆ. ಈ ವೇಳೆ ಆತನ ಮನೆಯಲ್ಲಿ ದಾಸ್ತಾನು ಇರಿಸಿದ್ದ ಒಟ್ಟು 6 ಕೋಟಿ ರೂ. ಮೌಲ್ಯದ 6.310 ಕೆಜಿ ಎಂಡಿಎಂಎ, 3 ಮೊಬೈಲ್ ಫೋನ್‌ಗಳು, ಡಿಜಿಟಲ್ ತೂಕ ಮಾಪಕ, ಒಟ್ಟು 35 ಎಟಿಎಂ/ಡೆಬಿಟ್ ಕಾರ್ಡ್ ಗಳು, 17 ಇನ್ ಆಯಕ್ಟಿವ್ ಸಿಮ್‌ಕಾರ್ಡ್‌ಗಳು, 10 ವಿವಿಧ ಬ್ಯಾಂಕ್‌ಗಳ ಅಕೌಂಟ್ ಬುಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 6,00,63,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ