ಉಡುಪಿ: ವೈನ್‌ಶಾಪ್‌ನಲ್ಲಿ ಕಳ್ಳತನ: ಪ್ರಕರಣ ದಾಖಲು
ಉಡುಪಿ: ವೈನ್‌ಶಾಪ್‌ಗೆ ನುಗ್ಗಿದ ಕಳ್ಳರು ಸಾವಿರಾರು ರೂ. ನಗದು ಹಾಗೂ ಮದ್ಯವನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ.
ಅಲೆವೂರು ರಸ್ತೆಯಲ್ಲಿರುವ ವೈನ್‌ಶಾಪ್‌ವೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿರುವ ಸತೀಶ್ ಅವರು ಅ. 23ರಂದು ರಾತ್ರಿ ವ್ಯವಹಾರದ ಹಣವನ್ನು ಡ್ರಾವರ್‌ನಲ್ಲಿಟ್ಟು ವೈನ್ ಶಾಪ್‌ಗೆ ಬೀಗ ಹಾಕಿ ಮನೆಗೆ ತೆರಳಿದ್ದರು.
ಮರುದಿನ ಬೆಳಗ್ಗೆ ಕಳ್ಳತನ ನಡೆದಿರುವ ಬಗ್ಗೆ ಗಮನಕ್ಕೆ ಬಂದಿದೆ. ಕಳ್ಳರು ವೈನ್‌ಶಾಪ್‌ನ ಶಟರ್ ಅನ್ನು ತೆಗೆದು ಡ್ರಾವರ್‌ನಲ್ಲಿಟ್ಟಿದ್ದ 19,200 ರೂ. ನಗದು ಹಾಗೂ ವಿವಿಧ ರೀತಿಯ ಮದ್ಯವನ್ನು ಕಳ್ಳತನ ಮಾಡಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ