ಪಡುಬಿದ್ರಿ: ಖಾಸಗಿ ಎಕ್ಸ್ಪ್ರೆಸ್ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಹೆಜಮಾಡಿ ಟೋಲ್ ಗೇಟ್ ಬಳಿ ನಡೆದಿದೆ.
ಉಡುಪಿ ಕಡೆಗೆ ಬರುತ್ತಿದ್ದ ಮಂಜುನಾಥ ಹೆಸರಿನ ಖಾಸಗಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಚಾಲಕನ ಗಮನಕ್ಕೆ ಬಂದು ಬಸ್ ನಿಲ್ಲಿಸಿ ಕಾರ್ಯಾಚರಿಸಲಾಯಿತು. ತಕ್ಷಣ ಟೋಲ್ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸೇರಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಅಂತಿಮವಾಗಿ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಮೂಲಕ ಸಂಭಾವ್ಯ ಅವಘಢ ತಪ್ಪಿಸಿದ್ದಾರೆ. ಬಸ್‌ನ ತಾಂತ್ರಿಕ ದೋಷವೇ ಈ ಅವಘಢಕ್ಕೆ ಕಾರಣ ಎನ್ನಲಾಗಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ