Slider

ಉಡುಪಿ:- ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿವಾದ; ಸರ್ಕಾರವೇ ಈ ಕೃತ್ಯ ನಡೆಸಿರುವುದು ಖಂಡನಾರ್ಹ; ಪೇಜಾವರ ವಿಶ್ವ ಪ್ರಸನ್ನ ಸ್ವಾಮೀಜಿ

Udupinews

 





ಉಡುಪಿ:- ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಕಲಬೆರಿಕೆ ತುಪ್ಪ, ಪ್ರಾಣಿಗಳ ಕೊಬ್ಬು ಬಳಕೆ ಮಾಡಿರುವುದು ದೊಡ್ಡ ಅಪಚಾರ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ತಿಳಿಸಿದ್ದಾರೆ.

ತಿರುಪತಿ ಲಡ್ಡು ವಿವಾದದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಪ್ರಸಾದದಲ್ಲಿ ಮೀನಿನ ಎಣ್ಣೆ, ಹಂದಿಯ ಕೊಬ್ಬು, ಹಸುವಿನ ಕೊಬ್ಬು ಬಳಸಿದ್ದಾರೆ. ಇದು ಹಿಂದೂ ಸಮಾಜಕ್ಕೆ, ದೇವರಿಗೆ ಬಗೆದಿರುವ ಅಪಚಾರ. ಸರ್ಕಾರವೇ ಈ ಕೃತ್ಯ ನಡೆಸಿರುವುದು ಖಂಡನಾರ್ಹ ಎಂದು ಗುಡುಗಿದರು.

ತಿರುಪತಿಯ ಶ್ರೀನಿವಾಸ ದೇವರು ಗೋವಿನ ರಕ್ಷಣೆಗೆ ಅವತರಿಸಿದವರು. ಕ್ಷೇತ್ರದಲ್ಲಿ ಹಸು ಹುತ್ತಕ್ಕೆ ಹಾಲೆರೆಯುತ್ತಿತ್ತಂತೆ. ಮಾಲೀಕ ಹಸುವಿನ ಮೂಲಕ ಹುತ್ತವನ್ನು ಒಡೆಯಲು ಬಂದಿದ್ದನಂತೆ. ಆಗ ಹುತ್ತದಿಂದ ಮೇಲೆ ಬಂದ ಶ್ರೀನಿವಾಸ ಮಾಲೀಕನ ಏಟಿಗೆ ಮೈಯೊಡ್ಡಿದ್ದನಂತೆ. ಹಸುವನ್ನು ರಕ್ಷಿಸಿದ ಶ್ರೀನಿವಾಸ ಎಂಬುದು ಇತಿಹಾಸ. ಅಂತಹ ಶ್ರೀನಿವಾಸ ದೇವರಿಗೆ ಹಸುವಿನ ಕೊಬ್ಬಿನ ಪ್ರಸಾದ ನೀಡಿದ್ದೀರಿ. ಇದೊಂದು ದೊಡ್ಡ ಅಪರಾಧ. ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲಿನ ಹಲ್ಲೆ ಇದು. ಉಪಯೋಗಕ್ಕೆ ಅನರ್ಹವಾದ ತುಪ್ಪವನ್ನು ದೇವಾಲಯಕ್ಕೆ ಬಳಸಿ ಪ್ರಮಾದ ಮಾಡಿದ್ದೀರಿ. ಇಂತಹ ತುಪ್ಪ ತಯಾರಿಸುವ ಅಡ್ಡಗಳನ್ನು ಕಂಡು ಹಿಡಿದು ತನಿಖೆ ನಡೆಸುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.









0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo