ಉಡುಪಿ: ಉಡುಪಿ ನಗರದ ಮಿಷನ್ ಕಾಂಪೌಂಡ್ ಬಳಿ ಇರುವ ಸರಕಾರಿ ನೌಕರರ ವಸತಿ ಗೃಹಗಳಿಗೆ ರವಿವಾರ ರಾತ್ರಿ ನುಗ್ಗಿದ ಕಳ್ಳರು, ಅಪಾರ ಮೌಲ್ಯದ ನಗನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಉಡುಪಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಈ ವಸತಿ ಸಮುಚ್ಚಯದಲ್ಲಿ ವಿವಿಧ ಇಲಾಖೆಗಳ ಸರಕಾರಿ ನೌಕರರ ಕುಟುಂಬಗಳು ವಾಸವಾಗಿವೆ. ಎರಡು ದಿನಗಳ ಕಾಲ ರಜೆ ಇದ್ದ ಕಾರಣ ಇಲ್ಲಿನ ಕುಟುಂಬಗಳು ತಮ್ಮ ಊರಿಗೆ ತೆರಳಿತ್ತು ಎಂದು ತಿಳಿದುಬಂದಿದೆ.
ಮನೆಯಲ್ಲಿ ಯಾರು ಇಲ್ಲದ ಕಾರಣ ಈ ಸಮುಚ್ಚಯದಲ್ಲಿನ ಆರು ಮನೆಗಳ ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ಮೂಲದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆನ್ನಲಾಗಿದೆ. ಆರು ಮನೆಗಳ ಪೈಕಿ ಎರಡು ಮನೆಗಳಲ್ಲಿನ ಚಿನ್ನಾಭರಣ, ಮತ್ತೆರಡು ಮನೆಗಳಲ್ಲಿನ ನಗದು ಕಳವಾಗಿದ್ದು ಉಳಿದ ಎರಡು ಮನೆಗಳಲ್ಲಿ ಕಳವಿಗೆ ಯತ್ನ ನಡೆಸಿರುವುದು ತಿಳಿದುಬಂದಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ