ಉಡುಪಿ: ಚಾಮುಂಡೇಶ್ವರಿ ಬೆಟ್ಟ ಧಾರ್ಮಿಕ ಪ್ರದೇಶವಾಗಿದ್ದು, ಚಾಮುಂಡೇಶ್ವರಿ ಮಹಿಷಾಸುರ ಮರ್ದಿನಿ ಎಂಬುದಾಗಿ ನಾವು ನಂಬುತ್ತೇವೆ. ಆದುದರಿಂದ ನಮ್ಮ ಭಾವನೆಗೆ ಧಕ್ಕೆಯಾಗದ ರೀತಿಯಲ್ಲಿ ಮಹಿಷ ದಸರಾವನ್ನು ಆಚರಿಸಿಕೊಳ್ಳಲಿ ಎಂದು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಜವಾಬ್ದಾರಿಯುತ ಜನಪ್ರತಿನಿಧಿಗಳಾಗಿ ಸಂವಿಧಾನ ದೃಷ್ಠಿಯಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಏನು ಬೇಕಾದರೂ ಆಚರಣೆ, ಉತ್ಸವ ಮಾಡಬಹುದು ಎಂಬುದಾಗಿ. ಅದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿಯೂ ಸರಕಾರದ ಅನುಮತಿ ಪಡೆದು ಆಚರಣೆಯನ್ನು ಮಾಡಬಹುದಾಗಿದೆ ಎಂದರು.
ಮುಡಾ ಹಗರಣಕ್ಕೆ ಸಂಬಂಧಿಸಿ ಹೈಕೋರ್ಟ್ ಆದೇಶ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಿ ತನಿಖೆಯನ್ನು ಎದುರಿಸಲಿ. ತನಿಖೆಯಲ್ಲಿ ಯಾವ ರೀತಿ ವರದಿ ಬರುತ್ತದೆಯೋ ಆ ರೀತಿ ಅವರು ಮುಂದುವರೆಯಲಿ ಎಂದು ಅವರು ಹೇಳಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ