Slider

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಪತ್ತೆ ಬೆನ್ನಲ್ಲೇ; ರುಪತಿ ತಿರುಮಲ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಭಾರಿ ಇಳಿಕೆ

Udupinews

 

ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಪತ್ತೆ ಬೆನ್ನಲ್ಲೇ ತಿರುಪತಿ ತಿರುಮಲ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಭಾರಿ ಇಳಿಕೆ ಆಗಿದೆ. ರಜಾ ದಿನವಾದ ಭಾನುವಾರ ಇಂದು ಭಕ್ತರ ಸಂಖ್ಯೆ ಜಾಸ್ತಿ ಇರಬೇಕಿತ್ತು. ಆದರೆ ಈ ವಿಚಾರ ಬಯಲಾಗುತ್ತಿದ್ದಂತೆ ಭಕ್ತರು ದೇವಸ್ಥಾನಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.


ದೇವಸ್ಥಾನದ ಲಡ್ಡು ಕೌಂಟರ್‌ ಖಾಲಿ ಹೊಡೆಯುತ್ತಿದ್ದು, ದೇವಸ್ಥಾನಕ್ಕೆ ಬಂದ ಕೆಲ ಭಕ್ತರು ದೇವರ ದರ್ಶನ ಮುಗಿಸಿ ಹಾಗೇ ವಾಪಸ್ಸಾಗುತ್ತಿದ್ದಾರೆ. ಇನ್ನು ಲಡ್ಡು ಪ್ರಸಾದ ಅಪವಿತ್ರವಾಗಿರುವ ವಿಚಾರದ ಬೆನ್ನಲ್ಲೇ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ದೇವಸ್ಥಾನದ ಶುದ್ಧೀಕರಣಕ್ಕೆ ಸೂಚನೆ ನೀಡಿದ್ದಾರೆ.

ತಿರುಪತಿ ತಿರುಮಲ ದೇವಸ್ಥಾನದ ಪವಿತ್ರ ಪ್ರಸಾದ ಅಪವಿತ್ರವಾಗಿರುವ ವಿಚಾರ ಗಂಭೀರವಾಗಿದೆ. ತಿಮ್ಮಪ್ಪನ ಭಕ್ತರಲ್ಲಿ ಈ ವಿಚಾರ ದೊಡ್ಡ ಮಟ್ಟದ ಘಾಸಿ ಮಾಡಿದ್ದು, ತಿರಪತಿ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ಖರೀದಿಗೆ ಹೆಚ್ಚಿನ ಭಕ್ತರು ಕಾಣುತ್ತಿಲ್ಲ. ಅದರಲ್ಲೂ ದೇವಸ್ಥಾನದಲ್ಲಿ ಕೂಡ ಭಕ್ತರ ಸಂಖ್ಯೆ ಕಡಿಮೆ ಆಗಿದೆ. ಭಕ್ತಾದಿಗಳಲ್ಲಿ ದೇವಸ್ಥಾನದ ಪಾವಿತ್ರ್ಯತೆ ಹಾಗೂ ನಂಬಿಕೆಯನ್ನು ಉಳಿಸುವ ನಿಟ್ಟಿನಲ್ಲಿ ದೇವಸ್ಥಾನವನ್ನು ಶುದ್ದೀಕರಣ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಚಂದ್ರಬಾಬು ಹೇಳಿದ್ದಾರೆ.

ಈ ಕುರಿತಾಗಿ ಟಿಟಿಡಿ ಜೊತೆ ಸಿಎಂ ಚಂದ್ರಬಾಬು ನಾಯ್ಡು ತುರ್ತು ಸಭೆ ನಡೆಸಿದ್ದಾರೆ. ಪ್ರಧಾನ ಅರ್ಚಕ, ಪಂಡಿತರು, ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆದಿದೆ. ಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ಲಡ್ಡು ಶುದ್ಧೀಕರಣ - ದೇಗುಲ ಶುದ್ದೀಕರಣ ನಿರ್ಧಾರ ಮಾಡಲಾಗಿದೆ. ಹಿಂದಿನ ಜಗನ್ ಸರ್ಕಾರದ ವಿರುದ್ಧ ಸೂಕ್ತ ತನಿಖೆಗೂ ಒಪ್ಪಿಗೆ ನೀಡಲಾಗಿದೆ.









0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo