ಉಡುಪಿ:ಲಾರಿಯೊಂದು ಅಂಬಾಗಿಲಿನಿಂದ ಪೆರಂಪಳ್ಳಿ ಕಡೆಗೆ ಟರ್ನ್ ತೆಗೆದುಕೊಳ್ಳುತ್ತಿರುವಾಗ ಬೈಕ್ ಸವಾರ ಲಾರಿಯಡಿಗೆ ಸಿಲುಕಿ ಕೂದಲೆಳೆಯಲ್ಲಿ ಪಾರಾದ ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಕೆಲವು ತಿಂಗಳುಗಳ ಹಿಂದೆ ಅಂಬಾಗಿಲು ಪೆರಂಪಳ್ಳಿ ಕ್ರಾಸ್‌ನಲ್ಲಿ ಅಪಘಾತ ಸಂಭವಿಸಿ ಜೀವ ಬಲಿಯಾಗಿತ್ತು. ಇಂದು ಅದೇ ಘಟನೆಯನ್ನು ನೆನಪಿಸುವ ಅಪಘಾತ ಅದೇ ಸ್ಥಳದಲ್ಲಿ ಸಂಭವಿಸಿದ್ದು ದ್ವಿಚಕ್ರ ಸವಾರ ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾನೆ.
ಇಂತಹ ಕ್ರಾಸ್‌ಗಳು ಉಡುಪಿಯಲ್ಲಿ ಹಲವು ಕಡೆ ಇದ್ದು ದ್ವಿಚಕ್ರ ಸವಾರರು ಒಂಚೂರು ಮೈಮರೆತರೂ ಪ್ರಾಣಕ್ಕೇ ಸಂಚಕಾರ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ