ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಮಹಾಲಕ್ಷ್ಮೀ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ನೇಪಾಳ ಮೂಲದ ಮಹಾಲಕ್ಷ್ಮಿಯನ್ನು ಹತ್ಯೆಗೈದು ದೇಹದ ಭಾಗಗಳನ್ನು ತುಂಡರಿಸಿ ಫ್ರಿಡ್ಜ್ನಲ್ಲಿಟ್ಟು ಪ್ರಕರಣಕ್ಕೆ ಸಂಬಂಧಿಸಿದ ಶಂಕಿತ ವ್ಯಕ್ತಿ ಮುಕ್ತಿ ರಂಜನ್ ಒಡಿಶಾದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಈತ ಮಹಾಲಕ್ಷ್ಮಿ ಕೊಲೆ ಬಳಿಕ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈ ಸಂಬಂಧ ವಿಚಾರಣೆಗೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸರು ಒಡಿಶಾಗೆ ತೆರಳಲು ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸೆಪ್ಟೆಂಬರ್ 1ರ ತನಕ ಮಹಾಲಕ್ಷ್ಮಿ ಕೆಲಸಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2 ಅಥವಾ 3 ರಂದು ಕೊಲೆ ಆಗಿರಬಹುದು ಎಂದು ಪೊಲೀಸರು ಸದ್ಯಕ್ಕೆ ಅಂದಾಜಿಸಿದ್ದಾರೆ. ಇನ್ನೂ ಆಕೆ ಕೆಲಸ ಮಾಡ್ತಿದ್ದ ಶಾಪ್‌ನ ಟೀಂ ಲೀಡರ್ ಮುಕ್ತಿರಂಜನ್ ಕೂಡ ಸೆಪ್ಟೆಂಬರ್ 1ರ ನಂತರ ಕೆಲಸಕ್ಕೆ ಬಾರದೇ ಇರೋದು ಹಲವು ಅನುಮಾಗಳಿಗೆ ಕಾರಣವಾಗಿತ್ತು. ಒಡಿಶಾದಲ್ಲಿ ಹಂತಕ ಇರುವ ಶಂಕೆ ಮೇರೆಗೆ ಪೊಲೀಸರು ಅಲ್ಲಿಗೆ ತೆರಳಿದ್ದರು. ಕೊಲೆ ಪ್ರಕರಣದ ಬಗ್ಗೆ ಒಡಿಶಾ ಪೊಲೀಸರಿಗೂ ಸಹ ಮಾಹಿತಿ ನೀಡಿದ್ದರು
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ