ಕುಂದಾಪುರ:- ನಿಂತಿದ್ದ ಇನೋವಾ ಕಾರಿಗೆ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ ತಾಲೂಕಿನ ಅರಾಟೆ ಸೇತುವೆ ಬಳಿ ಸೆ. 23 ರಂದು ಸೋಮವಾರ ರಾತ್ರಿ ನಡೆದಿದೆ.
ಮೃತ ಚಾಲಕನನ್ನು ಭಟ್ಕಳ ಮೂಸ ನಗರದ ನಿವಾಸಿ ನಾಸಿರ್ ಸಿದ್ದೀಕ್ ಎಂದು ಗುರುತಿಸಲಾಗಿದೆ.
ಕುಟುಂಬದವರೊಂದಿಗೆ ಮಂಗಳೂರು ಆಸ್ಪತ್ರೆಗೆ ತೆರಳಿದ್ದ ಇವರು ಭಟ್ಕಳಕ್ಕೆ ಮರಳುತ್ತಿದ್ದ ವೇಳೆ ರಾತ್ರಿ 8:45 ರ ಸುಮಾರಿಗೆ ಅರಾಟೆ ಸೇತುವೆ ಬಳಿ ಬರುತ್ತಿದ್ದಾಗ ವಾಹನದಿಂದ ಅಸ್ವಾಭಾವಿಕ ಶಬ್ಧ ಕೇಳಿದ್ದರಿಂದ ಕಾರನ್ನು ರಸ್ತೆ ಬದಿ ನಿಲ್ಲಿಸಿ ಸರಿಪಡಿಸುತ್ತಿದ್ದರು. ಈ ವೇಳೆ ಅದೇ ದಾರಿಯಾಗಿ ಕುಂದಾಪುರದಿಂದ ಗಂಗೊಳ್ಳಿಗೆ ತೆರಳುತ್ತಿದ್ದ ಖಾಸಗಿ ಬಸ್ ಕಾರಿನ ಬಾಗಿಲಿಗೆ ಡಿಕ್ಕಿ ಹೊಡೆದಿದ್ದು, ಅಲ್ಲೇ ಇದ್ದ ನಾಸಿರ್‌ಗೆ ತೀವ್ರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಹರೀಶ್ ಆರ್. ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ