ಅನುಮತಿ ನೀಡಿದಕ್ಕಿಂತ ಹೆಚ್ಚಿನ ಶಬ್ಧ ಹೊರಹೊಮ್ಮಿಸುವ ಧ್ವನಿವರ್ಧಕಗಳನ್ನು ಗಣೇಶೋತ್ಸವದಲ್ಲಿ ಬಳಸುವುದು ಹಾನಿಕಾರಕವಾಗಿದ್ದರೆ, ಈದ್-ಇ-ಮಿಲಾದ್-ಉನ್-ನಬಿ ಮೆರವಣಿಗೆಯಲ್ಲಿ ಬಳಸುವುದು ಹಾನಿಕಾರಕವೇ ಎಂದು ಬಾಂಬೆ ಹೈಕೋರ್ಟ್ ಬುಧವಾರ ಹೇಳಿದೆ.
ಈದ್ ಮಿಲಾದ್ ಮೆರವಣಿಗೆ ಸಮಯದಲ್ಲಿ ಡಿಜೆ, ಡ್ಯಾನ್ಸ್ ಮತ್ತು ಲೇಸರ್ ಲೈಟ್‌ಗಳ ಬಳಕೆಯನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆಯಯನ್ನು ಮುಖ್ಯ ನ್ಯಾಯಮೂರ್ತಿ ಡಿಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರ ವಿಭಾಗೀಯ ಪೀಠವು ನಡೆಸಿ ಅಭಿಪ್ರಾಯಪಟ್ಟಿತು.
ಅಧಿಕ ಡೆಸಿಬಲ್ ಸೌಂಡ್ ಸಿಸ್ಟಂಗಳ ಬಳಕೆಗೆ ಅನುಮತಿ ನೀಡದಂತೆ ಪೊಲೀಸರು ಹಾಗೂ ಪಾಲಿಕೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಗಳು ಹೈಕೋರ್ಟ್‌ಗೆ ಕೋರಲಾಗಿತ್ತು. ಡಿಜೆ, ಡ್ಯಾನ್ಸ್ ಮತ್ತು ಲೇಸರ್ ಲೈಟ್‌ಗಳನ್ನು ಬಳಸಿ ಸಂಭ್ರಮಿಸುವಂತೆ ಪವಿತ್ರ ಗಂಥ್ರ ಕುರಾನ್ನಲ್ಲಿ ಎಲ್ಲಿಯೂ ಹೇಳಿಲ್ಲ ಎಂದು ಅರ್ಜಿದಾರರು ಹೇಳಿದ್ದರು.
ಗಣೇಶ ಹಬ್ಬದ ಆರಂಭಕ್ಕೂ ಒಂದು ತಿಂಗಳ ಮುನ್ನ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಉಲ್ಲೇಖಿಸಿದ ಪೀಠವು ಹಬ್ಬದ ಸಂದರ್ಭದಲ್ಲಿ ಅನುಮತಿ ಮಿತಿಯನ್ನು ಮೀರಿದ ಧ್ವನಿವರ್ಧಕಗಳ ಬಳಕೆಯನ್ನು ಶಬ್ಧ ಮಾಲಿನ್ಯದ ಕಾಯ್ದೆ 2000ರ ಅಡಿಯಲ್ಲಿ ನಿಷೇಧಿಸುವುದನ್ನು ಹೇಳಿದೆ.
ಅರ್ಜಿದಾರರ ಪರ ವಕೀಲ ಓವೈಸ್ ಪೆಚ್ಕರ್ ಅವರು, ಈ ಆದೇಶಕ್ಕೆ ಈದ್ ಅನ್ನು ಸೇರಿಸಲು ನ್ಯಾಯಾಲಯವನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 'ಸಾರ್ವಜನಿಕ ಹಬ್ಬಗಳು' ಎಂದು ಹೇಳಿರುವಾಗ ಈದ್ ಕೂಡ ಸೇರುತ್ತದೆ. 'ಗಣೇಶ ಚತುರ್ಥಿ ಸಂದರ್ಭದಲ್ಲಿ ಜನರಿಗೆ ತೊಂದರೆಯಾಗುವುದಾದರೆ, ಈದ್ ಮಿಲಾದ್ ಸಂದರ್ಭದಲ್ಲೂ ಸಾರ್ವಜನಿಕರಿಗೆ ತೊಂದರೇ ಆಗುತ್ತದೆ ಎಂದು ಅರ್ಜಿಯನ್ನು ಇತ್ಯರ್ಥಗೊಳಿಸಿತು.
ಲೇಸರ್ ದೀಪಗಳ ಬಳಕೆಯಿಂದ ಜನರ ಮೇಲೆ ಹಾನಿಕಾರಕ ಪರಿಣಾಮಗಳ ಬೀರುತ್ತದೆ ಎಂಬ ವಾದಕ್ಕೆ ವೈಜ್ಞಾನಿಕ ಪುರಾವೆಗಳನ್ನು ನೀಡುವಂತೆ ಅರ್ಜಿದಾರರರಿಗೆ ಪೀಠವು ಹೇಳಿತು. ಇಂತಹ ಅರ್ಜಿಗಳನ್ನು ಸಲ್ಲಿಸುವ ಮುನ್ನ ಸೂಕ್ತ ಸಂಶೋಧನೆ ನಡೆಸಬೇಕು ಎಂದು ಪೀಠ ಹೇಳಿದೆ. ನೀವು ನಿಮ್ಮ ಸಂಶೋಧನೆಯನ್ನು ಏಕೆ ಮಾಡಲಿಲ್ಲ? ಇದು ಮನುಷ್ಯರಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತುಪಡಿಸದ ಹೊರತು ನಾವು ಅಂತಹ ಸಮಸ್ಯೆಯನ್ನು ಹೇಗೆ ನಿರ್ಣಯಿಸುತ್ತೇವೆ? ಪೀಠ ಅಭಿಪ್ರಾಯಪಟ್ಟಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ