ಬ್ರಹ್ಮಾವರ: ಬಿ ಪಿ ಎಲ್ ಪಡಿತರ ಕಾರ್ಡ್ ಹೊಂದಿದವರು ಬ್ಯಾಂಕ್ ನಲ್ಲಿ ಯಾವುದೇ ಕಾರಣಕ್ಕೆ 1.20 ಲಕ್ಷ ಸಾಲ ಮಾಡಿದ್ರೆ ಅವರ ಬಿಪಿಎಲ್ ಕಾರ್ಡ್ ರದ್ದು ಆಗುವ ಸಾಧ್ಯತೆ ಇದೆ. ಬ್ರಹ್ಮಾವರ ತಾಲೂಕು ಆಡಳಿತದ ಆಹಾರ ಇಲಾಖೆ ವಿಭಾಗದಲ್ಲಿ ಕೆಲವು ದಿನದಿಂದ ಬಡವರು ತಮ್ಮ ಆದಾಯ ದೃಢೀಕರಣದೊಂದಿಗೆ ಸರತಿಯ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ.
ಹಲವಾರು ಮಾನದಂಡದಿಂದ ಗ್ರಾಮ ಆಡಳಿತಾಧಿಕಾರಿಗಳು ಕುಟುಂಬಕ್ಕೆ ಆದಾಯ ದೃಢೀಕರಣ ನೀಡಿದೆ. ಬಿಪಿಎಲ್ ಪಡಿತರ ಕಾರ್ಡ್ ಹೊಂದಿದವರ ಮಕ್ಕಳು ಸರಕಾರಿ ನೌಕರರು ಅಥವಾ ಮನೆಯವರು ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಪಡಿತರ ಕಾರ್ಡ್ ಆಧಾರ್ ಕಾರ್ಡ್ ಜೋಡಣೆಯಾಗಿದ್ದರೆ ತಾನಾಗಿಯೇ ಬಿಪಿಎಲ್ ಕಾರ್ಡ್ ರದ್ದು ಆಗುತ್ತಿತ್ತು. ಇದೀಗ ಹೊಸ ನೀತಿಯಂತೆ ಬಿಪಿಎಲ್ ಕಾರ್ಡ್ ಹೊಂದಿದ ವ್ಯಕ್ತಿ ಬ್ಯಾಂಕ್‌ನಲ್ಲಿ 1.20 ಲಕ್ಷಕ್ಕಿಂತ ಹೆಚ್ಚು ಸಾಲ ಪಡೆದಲ್ಲಿ ಪಡಿತರ ಮತ್ತು ಅನೇಕ ಸರಕಾರಿ ಸೌಲಭ್ಯಕ್ಕೆ ತೊಂದರೆ ಅನುಭವಿಸುವಂತೆ ಆಗಿದೆ.
ಕಡು ಬಡವರು ಕೂಡಾ ಮನೆ ಮದುವೆ ಉದ್ಯೋಗ ಸೇರಿದಂತೆ ನಾನಾ ಕಾರಣಕ್ಕೆ ಬ್ಯಾಂಕ್ ನಲ್ಲಿ ಸಾಲ ಪಡೆಯುವ ಒಂದೇ ಕಾರಣಕ್ಕೆ ಸರಕಾರ ಆದಾಯದ ಮಾನದಂಡ ಹೆಚ್ಚಳದ ಕಾರಣ ನೀಡಿ ತಾಲೂಕಿನಲ್ಲಿ 45000 ಬಿಪಿಎಲ್ ಕಾರ್ಡ್ಗಳಲ್ಲಿ 5000 ದಷ್ಟು ರದ್ದಾಗುತ್ತಿರುವುದಕ್ಕೆ ಸಾರ್ವಜನಿಕರು ತೀರಾ ಅತಂಕಕ್ಕೀಡಾಗಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ