ಭಾರತದ ದೇವದೇವತೆಗಳೆಂದರೆ ದೇವರು ಎಂದರ್ಥ ವಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ಮೋದಿ ಪ್ರಬಲ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಶ್ರೀನಗರದಲ್ಲಿ ಚುನಾವಣೆ ರ್‍ಯಾಲಿಯಲ್ಲಿ ಮಾತನಾ ಡಿದ ಅವರು, ಇದು ಕಾಂಗ್ರೆಸ್‌ನ ಮನಃಸ್ಥಿತಿಯನ್ನು ತೋರಿಸುತ್ತದೆ. ಆ
ಪಕ್ಷದ ವಾರಸುದಾರ ವಿದೇಶದಲ್ಲಿನಮ್ಮ ದೇವ-ದೇವತೆಯರು ದೇವ ರಲ್ಲ ಎಂದಿದ್ದಾರೆ.
ಇದು ನಮ್ಮ ಶ್ರದ್ಧೆಗೆ ಮಾಡಿದ ಅವಮಾನ. ಇದು ಇತರ ಧರ್ಮಗಳಿಂದ, ಇತರ ದೇಶಗಳಿಂದ ಆಮದು ಮಾಡಿಕೊಂಡ ನಕ್ಸಲ್ ಮನಸ್ಥಿತಿ’ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ನಮ್ಮ ಶ್ರದ್ಧೆ ಮತ್ತು ಸಂಸ್ಕೃತಿಯನ್ನು ಕೆಲವೇ ಕೆಲವು ಮತಗಳಿಗಾಗಿ ಅತಂತ್ರಗೊಳಿಸಬಲ್ಲದು. ಅವರ ಈ ತಪ್ಪಿಗಾಗಿ ಶಿಕ್ಷೆಯಾಗಲೇಬೇಕು. ಇವನ್ನೆಲ್ಲ ಅವರು ಸುಮ್ಮನೆ, ಬಾಯ್ತಪ್ಪಿ ಹೇಳುತ್ತಿಲ್ಲ. ಇದೊಂದು ವ್ಯವಸ್ಥಿತ ಪಿತೂರಿ. ಕಾಂಗ್ರೆಸ್‌ನ ನಕ್ಸಲ್ ಮನಸ್ಥಿತಿ ಜಮ್ಮುವಿನ ಡೋಗ್ರಾ ಸಂಸ್ಕೃತಿಯನ್ನೂ ಅವಹೇಳನ ಮಾಡಿದೆ ಎಂದು ಮೋದಿ ಹೇಳಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ