ಉಡುಪಿ : ರೈಲ್ವೆ ನಿಲ್ದಾಣದಲ್ಲಿ ರೈಲು ನಿಂತಾಗ ಮಾತ್ರ ರೈಲು ಹತ್ತಬೇಕು. ಒಂದು ವೇಳೆ ಚಲಿಸುತ್ತಿರುವ ರೈಲನ್ನು ಹತ್ತುವ ಸಾಹಸ ಏನಾದರು ಮಾಡಿದರೆ ನಮ್ಮ ಜೀವಕ್ಕೆ ಕುತ್ತು ಬರುವಂತಹ ಸಂಭವವಿರುತ್ತದೆ. ಇದೀಗ ಉಡುಪಿಯಲ್ಲಿ ಅಂತದ್ದೇ ಘಟನೆ ನಡೆದಿದ್ದು, ಚಲಿಸುತ್ತಿರುವ ರೈಲನ್ನು ಹತ್ತಲು ಹೋಗಿ ಮಹಿಳೆ ಆಯತಪ್ಪಿ ಬಿದ್ದಿದ್ದಾರೆ ಈ ವೇಳೆ ತಕ್ಷಣ ಅಲ್ಲೇ ಇದ್ದ ಆರ್ ಪಿ ಎಫ್ ಮಹಿಳಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಹೌದು, ಈ ಒಂದು ಘಟನೆ ಉಡುಪಿಯಲ್ಲಿ ನಡೆದಿದ್ದು ಮಂಗಳೂರು ಮತ್ತು ಮಡಗಾಂವ್ ಮಧ್ಯ ಚಲಿಸುತ್ತಿದ್ದ ರೈಲನ್ನು ಹತ್ತಲು ಓಡುತ್ತಿದ್ದ ಮಹಿಳೆಯನ್ನು ಆರ್ ಪಿ ಎಫ್ ಮಹಿಳಾ ಸಿಬ್ಬಂದಿ ರಕ್ಷಿಸಿದ್ದಾರೆ. ಇಂದು ಬೆಳಗ್ಗೆ ನಡೆದ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಂಗಳೂರು ಮಡಗಾಂವ್ ರೈಲು ಹತ್ತುವಾಗ ಈ ಒಂದು ದುರಂತ ಸಂಭವಿಸಿದೆ. ಈ ವೇಳೆ ಆರ್ಪಿಎಫ್ ಮಹಿಳಾ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಇದಿಗ ಆರ್ಪಿಎಫ್ ಮಹಿಳಾ ಸಿಬ್ಬಂದಿ ಅರ್ಪಣಾ ಕಾರ್ಯಕ್ಕೆ ಎಲ್ಲರಿಂದ ಇದೀಗ ಶ್ಲಾಘನೆ ವ್ಯಕ್ತವಾಗುತ್ತಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ